ಇಬ್ಬರು ಉಗ್ರರ ಮೃತ ದೇಹವನ್ನು ವಶಕ್ಕೆ ಪಡೆದಿರುವ ಯೋಧರು ಅವರ ಬಳಿ ಇದ್ದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಇನ್ನುಳಿದ ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಪಾಂಪೋರ್ (ಅ.12): ಜಮ್ಮು ಕಾಶ್ಮೀರದ ಪಾಂಪೋರ್’ನಲ್ಲಿ ಸೇನಾ ಕಾರ್ಯಚರಣೆ ಮುಂದುವರಿದೆ. ಸೇನಾ ದಾಳಿಗೆ ಮತ್ತೊರ್ವ ಉಗ್ರ ಬಲಿಯಾಗಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ 3 ದಿನದಿಂದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ, ಇಡಿಐ ಬಿಲ್ಡಿಂಗ್ ನಲ್ಲಿ ಅಡಗಿ ಕುಳಿತಿದ್ದ ಉಗ್ರರ ಪೈಕಿ ಈವರೆಗೆ ಇಬ್ಬರನ್ನು ಭಾರತೀಯ ಯೋಧರು ಸದೆ ಬಡಿದಿದ್ದಾರೆ. ನಿನ್ನೆ ಸಂಜೆ ಒಬ್ಬ ಉಗ್ರನನ್ನು ಗುಂಡಿಕ್ಕಿ ಕೊಂದಿದ್ದ ಯೋಧರು, ಇಂದು ಮತ್ತೊರ್ವನನ್ನು ನೆಲಕುರಿಳಿಸಿದ್ದಾರೆ.

ಇಬ್ಬರು ಉಗ್ರರ ಮೃತ ದೇಹವನ್ನು ವಶಕ್ಕೆ ಪಡೆದಿರುವ ಯೋಧರು ಅವರ ಬಳಿ ಇದ್ದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಇನ್ನುಳಿದ ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಇದರ ಜೊತೆ ಭಾರತ ಪಾಕ್ ಗಡಿಯಲ್ಲಿ ಲಷ್ಕರ್ ಏ ತೋಯ್ಬ ದ ಇನ್ನು ಆರು ಉಗ್ರರು ಅಡಗಿರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿಯನ್ನು ನೀಡಿದೆ. ಇದರಿಂದ ಗುಪ್ತಚರದಳ ಎಚ್ಚರಿಕೆ ವಹಿಸುವಂತೆ ಭಾರತೀಯ ಸೇನೆಗೆ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.