ನವದೆಹಲಿ(ಸೆ.3) ಎನ್ ಡಿಎ ಸರಕಾರದ ನಂತರ ವಿದೇಶದಿಂದ ಆಗಮಿಸುವವರ ಸಂಖ್ಯೆಯೂ ಹೆಚ್ಚಿದೆ. ಅಂದರೆ ವಿದೇಶದಿಂದ ಆಗಮಿಸಿ ಭಾರತದಲ್ಲಿ ಬಂಡವಾಳ ಹೂಡಿಕೆ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಜತೆಗೆ ಪ್ರಧಾನಿ ಸೇರಿದಂತೆ ಕೇಂದ್ರದ ಸಚಿವರು ಬಾಂಧವ್ಯ ವೃದ್ಧಿಗೆ ಪ್ರವಾಸ ಕೈಗೊಳ್ಳುತ್ತಿರುತ್ತಾರೆ.

ಕ್ಯಾಬಿನೆಟ್ ಸಕ್ರೇಟರಿಯೇಟ್ ಕಳೆದ ವಾರ ನಡೆಸಿದ ಸಭೆಯಲ್ಲಿ ತೀರ್ಮಾನವೊಂದನ್ನು ತೆಗೆದುಕೊಂಡಿದೆ. ವಿದೇಶಿ ಭಾಷೆಗಳ ವ್ಯಾಖ್ಯಾನಕಾರರ ಕೊರತೆ ಇದ್ದುಭರ್ತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದೆ.

ಕೇಂದ್ರ ಸರಕಾರ ವಿದೇಶಾಂಗ ವ್ಯವಹಾರ ಇಲಾಖೆಗೆ ಸಂಬಂಧಿಸಿ ಹೊಸ ಜಂಟಿ ಕಾರ್ಯದರ್ಶಿ ಹುದ್ದೆ ರಚನೆಗೂ ಒಪ್ಪಿಗೆ ನೀಡಿದೆ. ಈ ಮೂಲಕ ಭಾಷಾ ತಜ್ಞರನ್ನು, ವ್ಯಾಖ್ಯಾನಕಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಲಿದೆ.

ಪ್ರಧಾನಿ ನರೇಂದ್ರ ಮೋದಿಗೆ ಸಲಹೆ ನೀಡುವಲ್ಲಿ ಕೆಲ ವ್ಯಾಖ್ಯಾನಕಾರರು ಕೆಲಸ ಮಾಡುತ್ತಿದ್ದಾರೆ. ಇದನ್ನು ಹೊರತುಪಡಿಸಿದರೆ ಈ ಕೇಡರ್ ನಲ್ಲಿ ಹೆಚ್ಚಿನ ಸಿಬ್ಬಂದಿ ಇಲ್ಲ. ಹಿಂದೆ ಪ್ರಧಾನಿ ಚೀನಾ ಪ್ರವಾಸದ ವೇಳೆಯೂ ಸಮಸ್ಯೆ ಎದುರಾಗಿತ್ತು. ಈಗ ವಿದೇಶಾಂಗ ಇಲಾಖೆ ಎಲ್ಲವನ್ನು ನಿಭಾಯಿಸಲು ಮುಂದಾಗಿದೆ.