ನವದೆಹಲಿ[ಜು.23]: ಪ್ರಸಕ್ತ ಪ್ರಸಾರ ಭಾರತಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗ, ಅರಕಲಗೂಡು ಸೂರ್ಯಪ್ರಕಾಶ್‌ ಅವರನ್ನು ಕೇಂದ್ರ ಸರ್ಕಾರ ಗೋವಾ ರಾಜ್ಯಪಾಲರನ್ನಾಗಿ ನೇಮಿಸುವ ಸಾಧ್ಯತೆ ಇದೆ. ಗೋವಾ ರಾಜ್ಯಪಾಲೆ ಮೃದುಲಾ ಸಿನ್ಹಾ ಅವರ ಅಧಿಕಾರ ಅವಧಿ ಆಗಸ್ಟ್‌ನಲ್ಲಿ ಕೊನೆಗೊಳ್ಳಲಿದೆ. ಅವರ ಸ್ಥಾನಕ್ಕೆ ಸೂರ್ಯಪ್ರಕಾಶ್‌ ಅವರನ್ನು ನೇಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ಪತ್ರಕರ್ತರಾಗಿರುವ ಸೂರ್ಯ ಪ್ರಕಾಶ್‌ ಅವರು ಕರ್ನಾಟಕದ ಹಾಸನ ಜಿಲ್ಲೆಯ ಅರಕಲಗೂಡಿನವರು. ಇಂಡಿಯನ್‌ ಎಕ್ಸ್‌ಪ್ರೆಸ್‌, ದ ಪಯೊನಿಯರ್‌ ಮತ್ತು ಝೀ ನ್ಯೂಸ್‌ನಲ್ಲಿ ಅವರು ಕಾರ್ಯನಿರ್ವಹಿಸಿದ್ದರು. ಭಾರತದ ಸಂವಿಧಾನ ಹಾಗೂ ಸಂಸದೀಯ ವಿಷಯಗಳ ಪ್ರಮುಖ ವಿಮರ್ಶಕರಾಗಿ ಹೆಸರು ಮಾಡಿದ್ದಾರೆ.

ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಜೊತೆಜೊತೆಗೇ, ಸಂಸದೀಯ ನಡಾವಳಿ ಬಗ್ಗೆ ಅಪಾರ ಅನುಭವ ಹೊಂದಿದ್ದಾರೆ. ಜೊತೆಗೆ ಸಂಸತ್‌ ಮತ್ತು ವಂಶಪಾರಂಪರ‍್ಯ ರಾಜಕೀಯದ ಬಗ್ಗೆ ಪುಸ್ತಕಗಳನ್ನೂ ಬರೆದಿದ್ದಾರೆ.