ಅರ್ಜಿಗಳನ್ನು ನ್ಯಾಯಾಲಯದ ಅಂತರ್ಜಾಲ ತಾಣ www.ecourts.gov.in /shivamogga /onlinerecruitment ನಲ್ಲಿ ನೀಡಲಾದ ಲಿಂಕ್ ಮೂಲಕ ನ.20ರೊಳಗಾಗಿ ಸಲ್ಲಿಸುವುದು ಹಾಗೂ ಶುಲ್ಕವನ್ನು ಚಲನ್ ಮುಖಾಂತರ ನ.21ರೊಳಗೆ ಎಸ್‌'ಬಿಐ ಬ್ಯಾಂಕಿನಲ್ಲಿ ಪಾವತಿಸುವುದು.

ಶಿವಮೊಗ್ಗ(ನ.01): ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ (Stenographer) 8 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌'ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅರ್ಜಿಗಳನ್ನು ನ್ಯಾಯಾಲಯದ ಅಂತರ್ಜಾಲ ತಾಣ www.ecourts.gov.in /shivamogga /onlinerecruitment ನಲ್ಲಿ ನೀಡಲಾದ ಲಿಂಕ್ ಮೂಲಕ ನ.20ರೊಳಗಾಗಿ ಸಲ್ಲಿಸುವುದು ಹಾಗೂ ಶುಲ್ಕವನ್ನು ಚಲನ್ ಮುಖಾಂತರ ನ.21ರೊಳಗೆ ಎಸ್‌'ಬಿಐ ಬ್ಯಾಂಕಿನಲ್ಲಿ ಪಾವತಿಸುವುದು. ಅರ್ಜಿಯಲ್ಲಿ ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನಮೂದಿಸುವುದು, ಇ-ಮೇಲ್ ಐಡಿಯನ್ನು ಹೊಂದಿದ್ದಲ್ಲಿ ನಮೂದಿಸುವುದು.ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್‌'ಲೋಡ್ ಮಾಡುವುದು. ಅರ್ಜಿ, ಶುಲ್ಕ ತುಂಬಿದ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ಕಾಯ್ದಿರಿಸಿ ಅರ್ಹತಾ ಪರೀಕ್ಷೆ ಸಮಯದಲ್ಲಿ ಹಾಜರುಪಡಿಸಬೇಕು.

ಹೆಚ್ಚಿನ ಮಾಹಿತಿಯನ್ನು ನ್ಯಾಯಾಲಯದ ಮಾಹಿತಿ ಫಲಕದಲ್ಲಿ ಪ್ರಕಟಿಸಲಾಗಿದೆ ಎಂದು ನ್ಯಾ. ಆರ್.ಬಿ.ಧರ್ಮಗೌಡ ತಿಳಿಸಿದ್ದಾರೆ.