ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ರಾಜ್ಯದ ಇತರೆಡೆ ವಿಸ್ತರಿಸುವ ಮುನ್ನವೇ ಬೆಂಗಳೂರಿನ ಮಾದರಿಯಲ್ಲೇ ಕಡಿಮೆ ದರಕ್ಕೆ ಊಟ, ತಿಂಡಿ ನೀಡುವ ‘ಅಪ್ಪಾಜಿ ಕ್ಯಾಂಟೀನ್’ ಗುರುವಾರ ಮಂಡ್ಯದಲ್ಲೂ ಆರಂಭವಾಗಿದೆ.

ಮಂಡ್ಯ: ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ರಾಜ್ಯದ ಇತರೆಡೆ ವಿಸ್ತರಿಸುವ ಮುನ್ನವೇ ಬೆಂಗಳೂರಿನ ಮಾದರಿಯಲ್ಲೇ ಕಡಿಮೆ ದರಕ್ಕೆ ಊಟ, ತಿಂಡಿ ನೀಡುವ ‘ಅಪ್ಪಾಜಿ ಕ್ಯಾಂಟೀನ್’ ಗುರುವಾರ ಮಂಡ್ಯದಲ್ಲೂ ಆರಂಭವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಚ್.ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದಿಂದ ನಗರಸಭೆ ಮಳಿಗೆಯಲ್ಲಿ ಈ ಕ್ಯಾಂಟೀನ್ ಆರಂಭಿಸಲಾಗಿದೆ. ಸಂಸದ ಪುಟ್ಟರಾಜು ಗುರುವಾರ ಈ ಕ್ಯಾಂಟೀನ್‌ನಲ್ಲಿ ತಯಾರಿಸಿದ ಆಹಾರ ಸೇವಿಸುವ ಮೂಲಕ ಚಾಲನೆ ನೀಡಿದರು. ಕ್ಯಾಂಟೀನ್‌ನಲ್ಲಿ ₹10ಕ್ಕೆ ಬೆಳಗ್ಗೆ ತಿಂಡಿ,

ಇದೇ ದರಕ್ಕೆ ಮಧ್ಯಾಹ್ನ ಹಾಗೂ ರಾತ್ರಿ ಮುದ್ದೆ ಊಟ, ₹5ಕ್ಕೆ ಕಾಫಿ ದೊರೆಯಲಿದೆ.