Asianet Suvarna News Asianet Suvarna News

ಸಕ್ಕರೆ ನಗರಿ ಮಂಡ್ಯದಲ್ಲಿ ಖಾಕಿಯಿಂದಲೇ ಕಹಿ ಕೆಲಸ!: ಮಂಡ್ಯದಲ್ಲಿ ಪೊಲೀಸ್ ವಾಹನದಲ್ಲೇ ಜೂಜು!

ಕಾನೂನು ಪಾಲಿಸಬೇಕಾದ ಪೊಲೀಸರೇ ಇಲ್ಲಿ ಕಾನೂನನ್ನು  ಗಾಳಿಗೆ ತೂರುತ್ತಿದ್ದಾರೆ. ಎಲ್ಲಾದರೂ ಸಾರ್ವಜನಿಕರು ಅಕ್ರಮವಾಗಿ ಜೂಜಾಡುವುದು ಕಂಡು ಬಂದರೆ ತಕ್ಷಣವೇ ದಾಳಿ ನಡೆಸಿ ಬಂಧಿಸುವವರೇ ಇಲ್ಲಿ ರಾಜಾರೋಷವಾಗಿ ಇಸ್ಟೀಟ್ ಆಡುತ್ತಾರೆ. ಎಸ್ಪೀ ಕಚೇರಿ ಮಗ್ಗಲಲ್ಲೆ ಬೆಟ್ಸ್ ಕಟ್ಟಿಕೊಂಡು ಜೂಜಾಡುವ ಈ ಪೊಲೀಸರ ಕ್ರಮ ಈಗ  ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

Another Witness For The Illegal Activity Of Police Department

ಮಂಡ್ಯ(ಜೂ.29): ಕಾನೂನು ಪಾಲಿಸಬೇಕಾದ ಪೊಲೀಸರೇ ಇಲ್ಲಿ ಕಾನೂನನ್ನು  ಗಾಳಿಗೆ ತೂರುತ್ತಿದ್ದಾರೆ. ಎಲ್ಲಾದರೂ ಸಾರ್ವಜನಿಕರು ಅಕ್ರಮವಾಗಿ ಜೂಜಾಡುವುದು ಕಂಡು ಬಂದರೆ ತಕ್ಷಣವೇ ದಾಳಿ ನಡೆಸಿ ಬಂಧಿಸುವವರೇ ಇಲ್ಲಿ ರಾಜಾರೋಷವಾಗಿ ಇಸ್ಟೀಟ್ ಆಡುತ್ತಾರೆ. ಎಸ್ಪೀ ಕಚೇರಿ ಮಗ್ಗಲಲ್ಲೆ ಬೆಟ್ಸ್ ಕಟ್ಟಿಕೊಂಡು ಜೂಜಾಡುವ ಈ ಪೊಲೀಸರ ಕ್ರಮ ಈಗ  ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.

ಅಂದಾಗೇ ಈ ಘಟನೆ ನಡೆದಿರುವ ಸಕ್ಕರೆ ನಗರಿ ಎನಿಸಿರುವ ಮಂಡ್ಯದಲ್ಲಿ .ಅದು ಕೂಡ  ಎಸ್ಪೀ ಕಚೇರಿ ಮಗ್ಗಲ್ಲಲ್ಲೇ ಈ ರೀತಿ ಪೊಲೀಸ್ ಜೂಜು ನಡೆಯುತ್ತಿದೆ. ಪ್ರತಿನಿತ್ಯ ಎಸ್ಪಿ ಕಚೇರಿಯ  ಕಂಟ್ರೋಲ್ ರೂಂ ಡ್ಯೂಟಿಗೆಂದು ಬರುವ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿಗಳು ತಮ್ಮ ವಾಹನದಲ್ಲೇ ಹೀಗೆ ಅಕ್ರಮವಾಗಿ ಜೂಜಾಡ್ತಿರೋದನ್ನ ಸುವರ್ಣನ್ಯೂಸ್ ಬಯಲು ಮಾಡುತ್ತಿದೆ. ಅದೂ ಕೂಡ ಪೊಲೀಸ್ ಸಮವಸ್ತ್ರದಲ್ಲೆ  ಬೆಟ್ಸ್ ಕಟ್ಟಿ ಇಸ್ಪೀಟ್ ಆಡುವುದು ಎಷ್ಟು ಸರಿ ಅಂತಾ ಈಗ ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಪ್ರಶ್ನೆ  ಮಾಡುತ್ತಿದ್ದಾರೆ.

ಎಸ್ಪಿ ಕಚೇರಿಯ ಕಂಟ್ರೋಲ್ ರೂಂ ಡ್ಯೂಟಿಗಾಗಿ  ಬಳಿ  ಸದಾ ಸನ್ನದ್ದರಾಗಿರಬೇಕಾದ ಪೊಲೀಸ್ರು ಹೀಗೆ ಬೆಟ್ಸ್ ಕಟ್ಟಿಕೊಂಡು ಇಸ್ಟೀಡ್ ಆಡುತ್ತಿದ್ದರೆ ಅದು ಹೇಗೆ ಇವರು ಸೀನಿಯರ್ಸ್ ಆಗಿ ಕೆಲಸ ಮಾಡುತ್ತಾರೆ ಎನ್ನುವ ಅನುಮಾನ‌ ಈಗ ಮೂಡಿ ಬರುತ್ತಿದೆ. ಎಸ್ಪಿ ಕಚೇರಿ ಮಗ್ಗಲ್ಲಲ್ಲೆ ಅದು ಪೊಲೀಸ್ ವಾಹನದಲ್ಲೇ ರಾಜಾರೋಷವಾಗಿ ಬೆಟ್ಸ್ ಕಟ್ಟಿ ಇಸ್ಟೀಟ್ ಆಡುವುದು ಕಂಡು ಬರುತ್ತಿದ್ದರೂ ಪೊಲೀಸ್ ಇಲಾಖೆ ಅದೇಕೋ ಕಣ್ಮುಚ್ಚಿ ಕುಳಿತಿದೆ. ಅದೇ ಸಾರ್ವಜನಿಕರು ಈ ರೀತಿ ಬೆಟ್ಸ್ ಕಟ್ಟಿ‌ ಜೂಜಾಡುವುದರೆ ಕೇಸ್ ಜಡಿಯುವ ಪೊಲೀಸ್ರು  ಕರ್ತವ್ಯದ ಅವಧಿಯಲ್ಲೇ  ಹೀಗೇ ಜೂಜಾಡುತ್ತಿದ್ದರು ಸುಮ್ಮನಿಡುವುದು ಸಾಮಾನ್ಯ ಜನರಿಗೊಂದು‌ ನ್ಯಾಯ, ಪೊಲೀಸರಿಗೊಂದು ‌ನ್ಯಾಯ ಎನ್ನುವುದನ್ನು ತೋರಿಸುತ್ತಿದೆ.

ಇನ್ನಾದರೂ ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ಎಚ್ಚೆತ್ತು  ಇಂತಹ ಸೋಮಾರಿ ಪೊಲೀಸರ ವಿರುದ್ದ ಕ್ರಮ ಕೈಗೊಂಡು ಇಂತಹ ಸೋಮಾರಿ ಪೊಲೀಸರ ಕೈಗೆ  ಕೆಲಸ ಕೊಟ್ಟು  ಪೊಲೀಸರ ಅಕ್ರಮ ಜೂಜಿಗೆ ಕಡಿವಾಣ ಹಾಕಬೇಕಿದೆ.

Follow Us:
Download App:
  • android
  • ios