ಸರ್ಕಾರಿ ಜಮೀನು ಕಬಳಿಕೆ ತಪ್ಪಿಸಲು ಕಾರಣ ನನ್ನ ಪಿಐಎಲ್ ಪರಿಣಾಮ" ಹೈಕೋರ್ಟ್ ನಲ್ಲಿ 2013ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪರಿಣಾಮ ನಾವು ನುಡಿದಂತೆ ಭೂಮಿ ವಶಪಡಿಸಿಕೊಂಡಿದ್ದೇವೆಂದು ಸಿದ್ದರಾಮಯ್ಯ ಸುಳ್ಳು
ಸಿದ್ದರಾಮಯ್ಯ ಸುಳ್ಳು ಹೇಳ್ತಿದ್ದಾರೆಂದು ರಾಜೀವ್ ಚಂದ್ರಶೇಖರ್ ಗರಂ ಆಗಿದ್ದಾರೆ. ಟ್ವಿಟರ್ ಮೂಲಕ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ . ನನ್ನ ಪಿಐಎಲ್ ಪರಿಣಾಮದಿಂದಲೇ ಕಬಳಿಕೆಯಾಗಿದ್ದ ಸರ್ಕಾರಿ ಜಮೀನಿನ ರಿಕವರಿ ಮಾಡಲಾಗಿದೆ. ಆದರೆ ನಾವು ನುಡಿದಂತೆ ನಡೆದು ಜಮೀನು ರಿಕವರಿ ಮಾಡಿದ್ದೇವೆಂದ ಸಿಎಂ ಸುಳ್ಳು ಹೇಳಿದ್ದಾರೆ.
ಪಿಐಎಲ್'ಗೆ ಸ್ಪಂದಿಸಿ ಜಮೀನು ವಾಪಸ್ ಪಡೆಯಲು ಹೈಕೋರ್ಟ್ ಆದೇಶಿಸಿದೆ. ಭೂಕಬಳಿಕೆ ಕುರಿತು ನಿಯೋಜಿಸಿದ ವಿಶೇಷ ಕೋರ್ಟ್ ಕುರಿತೂ ಸಿಎಂ ನಿರ್ಲಕ್ಷಿಸಿದ್ದಾರೆ.ಕೋರ್ಟ್ ಗೆ ಸಮರ್ಪಕ ಆರ್ಥಿಕ ನೆರವು ನೀಡದೇ ಸರ್ಕಾರ ಸತಾಯಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಕುರಿತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕಿಡಿಕಾರಿದ್ದಾರೆ.
