ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೂವೆ ಗ್ರಾಮದ ಕಲ್ಮನೆಯಲ್ಲಿ  ಲೋಕೇಶ್ ಎನ್ನುವರಿಗೆ ಸೇರಿದ ಸರ್ವೇ ನಂಬರ್ 49ರಲ್ಲಿ ಇದ್ದ 3 ಎಕರೆ ಜಾಗವನ್ನು ಒತ್ತುವರಿ ಮಾಡಿ ಕಾಫೀ ತೋಟವನ್ನಾಗಿ ಪರಿರ್ವನೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಚಿಕ್ಕಮಗಳೂರು(ನ.2): ಕೌಂಟುಬಿಕ ಕಲಹದ ಮೂಲಕ ಭಾರೀ ಸುದ್ದಿ ಮಾಡಿದ್ದ ಮಾಜಿ ಶಾಸಕ ಕುಮಾರಸ್ವಾಮಿ ಈಗ ಮತ್ತೊಂದು ವಿವಾದದ ಸುಳಿಗೆ ಸಿಲುಕಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೂವೆ ಗ್ರಾಮದ ಕಲ್ಮನೆಯಲ್ಲಿ ಲೋಕೇಶ್ ಎನ್ನುವರಿಗೆ ಸೇರಿದ ಸರ್ವೇ ನಂಬರ್ 49ರಲ್ಲಿ ಇದ್ದ 3 ಎಕರೆ ಜಾಗವನ್ನು ಮಾಜಿ ಶಾಸಕ ಕುಮಾರಸ್ವಾಮಿ ಒತ್ತುವರಿ ಮಾಡಿ ಕಾಫೀ ತೋಟವನ್ನಾಗಿ ಪರಿರ್ವನೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲೋಕೇಶ್ ರವರ ತೋಟದ ಪಕ್ಕದಲ್ಲೇ ಮಾಜಿ ಶಾಸಕ ಕುಮಾರಸ್ವಾಮಿ 7 ಎಕರೆ ತೋಟವಿದ್ದು, ಅದರ ಪಕ್ಕದಲ್ಲೇ ಇದ್ದ ಲೋಕೇಶ್ ಎನ್ನುವರಿಗೆ ಸೇರಿದ 3 ಎಕರೆ ಜಾಗವನ್ನು ಶಾಸಕರಾಗಿದ್ದ ಅವಧಿಯಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡು ಒತ್ತುವರಿ ಮಾಡಿ ಸಾಗುವಳಿ ಮಾಡಿದ್ದಾರೆ ಎನ್ನುವ ಕೂಗು ಮೂಲ ಖಾತೆದಾರಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕ ಕುಮಾರಸ್ವಾಮಿ ಯಾವುದೇ ಭೂಮಿಯನ್ನು ಒತ್ತುವರಿ ಮಾಡಿಲ್ಲ, ಜಿಲ್ಲಾಡಳಿಯಿಂದಲೇ ಸರ್ವೇ ಕಾರ್ಯ ನಡೆಸಲಿ, ಒಂದು ವೇಳೆ ಒತ್ತುವರಿಯಾಗಿದ್ದರೆ ಭೂಮಿಯನ್ನು ನೀಡಲು ಸಿದ್ದ ರಾಜಕೀಯ ದುರುಉದ್ದೇಶದಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.