ಬೆಂಗಳೂರು(ಸೆ. 08): ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಲು ರಾಜ್ಯ ಸರಕಾರವೇ ಕಾರಣ ಎಂದು ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ದೂರಿದ್ದಾರೆ. ಸರಿಯಾದ ಕಾನೂನು ಕಾರ್ಯತಂತ್ರವಿಲ್ಲದೇ ಸುಪ್ರೀಂಕೋರ್ಟ್'ನಲ್ಲಿ ರಾಜ್ಯಕ್ಕೆ ಸೋಲುಂಟಾಗಿದೆ. ಇದಕ್ಕೆ ರಾಜ್ಯ ಸರಕಾರವೇ ಹೊಣೆ ಎಂದು ರಾಜೀವ್ ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂಕೋರ್ಟ್ ಆದೇಶದಿಂದ ಹಿನ್ನಡೆಯುಂಟಾಗಿರುವ ಎಲ್ಲ ರೈತರಿಗೂ ಮುಖ್ಯಮಂತ್ರಿಗಳು ಕೂಡಲೇ ತತ್'ಕ್ಷಣದ ಪರಿಹಾರ ಘೋಷಣೆ ಮಾಡಬೇಕು. ಹಾಗೂ ಕಾವೇರಿ ನೀರನ್ನು ರೈತರಿಗೆ ಬಿಡುಗಡೆ ಮಾಡಬೇಕು ಎಂದು ರಾಜ್ಯಸಭಾ ಸಂಸದರು ಆಗ್ರಹಿಸಿದ್ದಾರೆ.