ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ, SMA ಕಾಯಿಲೆಯಿಂದ ಬಳಲುತ್ತಿರುವ ಒಂದು ವರ್ಷದ ಹತ್ತು ತಿಂಗಳ ಕೀರ್ತನಳ ಚಿಕಿತ್ಸೆಗೆ ನೆರವು ಕೋರಿದ್ದಾರೆ. 16 ಕೋಟಿ ರೂ. ವೆಚ್ಚದ ಚಿಕಿತ್ಸೆಗೆ ಸಾರ್ವಜನಿಕರ ಸಹಾಯ ಹಸ್ತಕ್ಕಾಗಿ ಕರೆ ನೀಡಿದ್ದಾರೆ. ಕುಂಬ್ಳೆ ಸ್ವತಃ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದಾರೆ.
ಬೆಂಗಳೂರು: ಭಾರತ ಕ್ರಿಕೆಟ್ ಕಂಡ ದಿಗ್ಗಜ ಆಟಗಾರ, ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಕನ್ನಡಿಗ ಅನಿಲ್ ಕುಂಬ್ಳೆ ಸದಾ ಒಂದಿಲ್ಲೊಂದು ವಿಚಾರಕ್ಕೆ ಗಮನ ಸೆಳೆಯುತ್ತಲೇ ಬಂದಿದ್ದಾರೆ. ತಾವೊಬ್ಬ ದಿಗ್ಗಜ ಕ್ರಿಕೆಟಿಗನಾಗಿ ಬೆಳೆದು ನಿಂತಿದ್ದರೂ, ಕ್ರಿಕೆಟ್‌ನಾಚೆಗೆ ಒಳ್ಳೆಯ ಹ್ಯೂಮನ್‌ಬಿಯಿಂಗ್ ಆಗಿಯೂ ಜನರಿಗೆ ಹತ್ತಿರವಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಅನಿಲ್ ಕುಂಬ್ಳೆ ಕೀರ್ತನಾ ಎನ್ನುವ ಮುದ್ದಾದ ಹೆಣ್ಣು ಮಗಳನ್ನು ನಾವು ನೀವೆಲ್ಲರೂ ಸೇರಿ ಉಳಿಸಿಕೊಳ್ಳೋಣ ಎಂದು ಕರೆ ಕೊಟ್ಟಿದ್ದಾರೆ.
ಕೀರ್ತನಾ ಎನ್ನುವ ಹೆಣ್ಣು ಮಗಳು ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದು, ಆಕೆಗೆ ನಾವೆಲ್ಲರೂ ನಿಲ್ಲೋಣ ಎಂದು ಅನಿಲ್ ಕುಂಬ್ಳೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ. 'ನನಗೆ ವನ್ಯಜೀವಿಗಳಲ್ಲಿ, ಫೋಟೋಗ್ರಫಿಯಲ್ಲಿ ಆಸಕ್ತಿ ಬಂದಿದ್ದು ಮೊದಲಿಗೆ ನಾಗರಹೊಳೆ ನ್ಯಾಷನಲ್ ಪಾರ್ಕ್‌ಗೆ ಭೇಟಿ ನೀಡಿದ್ದಾಗ. 1996ನೇ ಇಸವಿಯಲ್ಲಿ ಕಬಿನಿಗೆ ಬಂದು ಹುಲಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದ್ದೆ. ಆದ್ರೆ ನಾನಿವತ್ತು ಕಬಿನಿಗೆ ಬಂದಾಗ ನಾನು ನಿಮ್ಮೆಲ್ಲರಿಗೂ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಕೇಳಿಕೊಂಡಿದ್ದಾರೆ.
'ಇದೆಂಥಾ ಬೋರಿಂಗ್ ಗುರು': ಪ್ರೆಸ್ ಕಾನ್ಫರೆನ್ಸ್‌ನಲ್ಲಿ ರೋಹಿತ್ ಶರ್ಮಾ ಹೀಗಂದಿದ್ದೇಕೆ?
ಅರಣ್ಯ ಇಲಾಖೆಯ ಡೆಪ್ಯೂಟಿ ಆರ್‌ಎಫ್‌ಒ ಆಗಿರುವ ಕಿಶೋರ್ ಕುಮಾರ್ ಹಾಗೂ ಅವರ ಪತ್ನಿ ನಾಗಶ್ರೀ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ ಟೀಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಮಗಳು ಕೀರ್ತನಗೆ ಒಂದು ವರ್ಷದ ಹತ್ತು ತಿಂಗಳಾಗಿದೆ. ಆದರೆ ಕೀರ್ತನಾಳಿಗೆ ಅಪರೂಪದಲ್ಲೇ ಅಪರೂಪದ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ(SMA) ಟೈಪ್ 2 ಎಂಬ ಅಪರೂಪದ ಜೆನೆಟಿಕ್ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಇದರ ಚಿಕಿತ್ಸೆಗೆ ಒಂದು ಇಂಜೆಕ್ಷನ್ ನೀಡಬೇಕು. ಆ ಇಂಜೆಕ್ಷನ್‌ಗೆ 16 ಕೋಟಿ ರುಪಾಯಿ ಖರ್ಚಾಗಲಿದೆ. ನಾನು ಈ ವಿಡಿಯೋ ಮೂಲಕ ಮೆಸೇಜ್ ಕಳಿಸುವುದೇನೆಂದರೇ ಇವಳನ್ನು ನಾವೆಲ್ಲರೂ ಸೇರಿ ಉಳಿಸಿಕೊಳ್ಳೋಣ. ಎಲ್ಲರೂ ತಮ್ಮ ಕೈಲಾದ ಸಹಕಾರ ನೀಡಿ, ನಾನು ಕೂಡಾ ನನ್ನ ವೈಯುಕ್ತಿಕ ಸಹಕಾರವನ್ನು ನೀಡುತ್ತೇನೆ. ನೀವು ಕೂಡಾ ದಯವಿಟ್ಟು ಹಣಕಾಸಿನ ನೆರವು ನೀಡುವ ಮೂಲಕ ಈ ಪುಟ್ಟ ಹುಡುಗಿಯನ್ನು ಉಳಿಸಿಕೊಳ್ಳೋಣ. ಎಲ್ಲರೂ ಕೈಜೋಡಿಸಿದರೆ ಇದು ಸಾಧ್ಯವಾಗುತ್ತೆ, ಹಾಗಾಗಿ ಸಹಕರಿಸಿ ಎಂದು ಅನಿಲ್ ಕುಂಬ್ಳೆ ಕೈಮುಗಿದು ಕೇಳಿಕೊಂಡಿದ್ದಾರೆ.
ಭಾರತ ತಂಡದಿಂದ ಕರುಣ್ ನಾಯರ್ ಕೈಬಿಟ್ಟಿದ್ದೇಕೆ? ಕೊನೆಗೂ ಮೌನ ಮುರಿದ ಅಜಿತ್ ಅಗರ್‌ಕರ್!
ಅನಿಲ್ ಕುಂಬ್ಳೆ ಈ ವಿಡಿಯೋ ಸಂದೇಶದ ಜತೆಗೆ ಕೀರ್ತನಾ ಪೋಷಕರ ಫೋನ್ ಪೇ ನಂಬರ್ ಹಾಗೂ ಸ್ಕ್ಯಾನರ್ ಕ್ಯೂಆರ್ ಕೋಡ್ ಅನ್ನು ಹಂಚಿಕೊಂಡಿದ್ದಾರೆ.
