'ಇದೆಂಥಾ ಬೋರಿಂಗ್ ಗುರು': ಪ್ರೆಸ್‌ ಕಾನ್ಫರೆನ್ಸ್‌ನಲ್ಲಿ ರೋಹಿತ್ ಶರ್ಮಾ ಹೀಗಂದಿದ್ದೇಕೆ?

ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ ಪ್ರಕಟ. ರೋಹಿತ್ ಶರ್ಮಾ ಪ್ರೆಸ್ ಕಾನ್ಫರೆನ್ಸ್ ಬೋರಿಂಗ್ ಎಂದ ಮಾತು ವೈರಲ್.

Rohit Sharma hilarious take at Champions Trophy press conference goes viral kvn

ಮುಂಬೈ: ಇಂಗ್ಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಹಾಗೂ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಜನವರಿ 18ರ ಶನಿವಾರ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಯಿತು. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್‌ಕರ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿ ಭಾರತ ತಂಡವನ್ನು ಪ್ರಕಟಿಸಿದರು.

ಇನ್ನು ಈ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಹಲವು ಪ್ರಶ್ನೆಗಳಿಗೆ ಆಯ್ಕೆ ಸಮಿತಿ ಮುಖ್ಯಸ್ಥರಾಗಿರುವ ಅಜಿತ್‌ ಅಗರ್‌ಕರ್ ಉತ್ತರಿಸಿದರು. ಆಟಗಾರರನ್ನು ಆಯ್ಕೆ ಮಾಡಿದ್ದಕ್ಕೆ ಹಾಗೂ ಕೆಲ ಆಟಗಾರರನ್ನು ಕೈಬಿಟ್ಟಿದ್ದಕ್ಕೆ ಪತ್ರಕರ್ತರ ಪ್ರಶ್ನೆಗೆ ಅಜಿತ್‌ ಅಗರ್‌ಕರ್ ಉತ್ತರ ನೀಡಿದರು. ಇನ್ನು ಸುದ್ದಿಗೋಷ್ಠಿ ಮುಗಿದ ಬಳಿಕ ರೋಹಿತ್ ಶರ್ಮಾ ಅವರು ಆಡಿದ ಒಂದು ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಭಾರತ ತಂಡದಿಂದ ಕರುಣ್ ನಾಯರ್‌ ಕೈಬಿಟ್ಟಿದ್ದೇಕೆ? ಕೊನೆಗೂ ಮೌನ ಮುರಿದ ಅಜಿತ್ ಅಗರ್‌ಕರ್!

ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಅಜಿತ್‌ ಅಗರ್‌ಕರ್ ಅವರನ್ನು ಉದ್ದೇಶಿಸಿ, 'ಈ ಪ್ರೆಸ್ ಕಾನ್ಫರೆನ್ಸ್ ಒಂದು ಥರ ಬೋರಿಂಗ್ ಆಗುತ್ತಿದೆ ಗುರು' ಎಂದು ಹೇಳಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲಿನ ಬಳಿಕ ಮೊದಲ ಬಾರಿಗೆ ಪ್ರೆಸ್‌ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ ರೋಹಿತ್ ಶರ್ಮಾ ಅವರ ಮಾತುಗಳ ಬಗ್ಗೆ ಸಾಕಷ್ಟು ಕುತೂಹಲವಿತ್ತು. ಆದರೆ ಹಿಟ್‌ಮ್ಯಾನ್ ಈ ಪ್ರೆಸ್ ಕಾನ್ಫರೆನ್ಸ್ ಬೋರಿಂಗ್ ಎಂದಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಹೀಗಿದೆ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಆರ್ಶದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ರವೀಂದ್ರ ಜಡೇಜಾ.

ಬಿಸಿಸಿಐ 10 ಅಂಶ ಮಾರ್ಗಸೂಚಿಗೆ ಆಟಗಾರರ ಆಕ್ಷೇಪ

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಸೋತ ಬಳಿಕ ಭಾರತ ತಂಡಕ್ಕೆ ಬಿಸಿಸಿಐ ನೀಡಿರುವ 10 ಅಂಶಗಳ ಮಾರ್ಗಸೂಚಿ ಬಗ್ಗೆ ಆಟಗಾರರಿಂದ ತೀವ್ರ ಆಕ್ಷೇಪವ್ಯಕ್ತವಾದಂತೆ ಕಂಡುಬರುತ್ತಿದೆ. ಅದರಲ್ಲೂ ವಿದೇಶ ಪ್ರವಾಸಗಳ ವೇಳೆ ಆಟಗಾರರ ಕುಟುಂಬಸ್ಥರು 14 ದಿನಗಳಿಗಿಂತ ಹೆಚ್ಚು ಕಾಲ ಉಳಿಯುವಂತಿಲ್ಲ ಎನ್ನುವ ನಿಯಮವನ್ನು ಮರುಜಾರಿ ಮಾಡಲು ನಿರ್ಧರಿಸಿರುವುದಕ್ಕೆ ಎಲ್ಲ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ.

ಶನಿವಾರ ಚಾಂಪಿಯನ್ಸ್ ಟ್ರೋಫಿಗೆ ತಂಡ ಪ್ರಕಟಗೊಂಡ ಬಳಿಕ ಸುದ್ದಿಗೋಷ್ಠಿ ನಡೆಸಲು ಬಿಸಿಸಿಐ ಪ್ರಧಾನ ಆಯ್ಕೆಗಾರ ಅಜಿತ್ ಅಗರ್ಕರ್ ಜೊತೆ ಕೂತಿದ್ದ ನಾಯಕ ರೋಹಿತ್ ಶರ್ಮಾ, 'ಬಿಸಿಸಿಐ ಕಾರ್ಯದರ್ಶಿ ಜೊತೆ ನಾನೀಗ ಮಾತನಾಡಬೇಕಿದೆ. ಕುಟುಂಬಸ್ಥರು ಪ್ರವಾಸಗಳಲ್ಲಿ ತಂಡದ ಜೊತೆ ಹೆಚ್ಚು ದಿನ ಇರುವಂತಿಲ್ಲ ಎನ್ನುವ ನಿಯಮದ ಬಗ್ಗೆ ಚರ್ಚೆ ನಡೆಸಬೇಕಿದೆ. ಬಿಸಿಸಿಐ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಎಲ್ಲರು ನನಗೆ ಹೇಳುತ್ತಿದ್ದಾರೆ' ಎಂದು ಹೇಳಿದ್ದು ಕೇಳಿಸಿತು.

ಸೊಕ್ಕು ಮಾಡಿದ ಸಂಜು ಸ್ಯಾಮ್ಸನ್‌ಗೆ ಬಿಗ್ ಶಾಕ್? ತನಿಖೆಗೆ ಮುಂದಾದ ಬಿಸಿಸಿಐ!

ಸುದ್ದಿಗೋಷ್ಠಿ ಆರಂಭಗೊಂಡ ಬಳಿಕ ಪತ್ರಕರ್ತರು ಬಿಸಿಸಿಐ ಮಾರ್ಗಸೂಚಿ ಬಗ್ಗೆ ರೋಹಿತ್‌ನ್ನು ಕೇಳಿದಾಗ, 'ನಿಯಮಗಳ ಬಗ್ಗೆ ನಿಮಗ್ಯಾರು ಹೇಳಿದ್ದು? ಬಿಸಿಸಿಐನಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದೆಯೇ?. ಬಿಸಿಸಿಐ ಅಧಿಕೃತವಾಗಿ ಹೇಳಲಿ' ಎಂದು ಪ್ರಶ್ನಿಸಿದರು.

9 ವರ್ಷ ಬಳಿಕ ರಣಜಿ ಕ್ರಿಕೆಟ್‌ಗೆ ರೋಹಿತ್‌ ಶರ್ಮಾ!

ಮುಂಬೈ : 2015ರ ಬಳಿಕ ಮೊದಲ ಬಾರಿಗೆ ರಣಜಿ ಟ್ರೋಫಿ ಪಂದ್ಯದಲ್ಲಿ ಆಡುವುದಾಗಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಘೋಷಿಸಿದ್ದಾರೆ. ಶನಿವಾರ ಚಾಂಪಿಯನ್ಸ್ ಟ್ರೋಫಿಗೆ ತಂಡ ಪ್ರಕಟಗೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ
ರೋಹಿತ್ ಈ ವಿಷಯ ತಿಳಿಸಿದರು. 

ಜನವರಿ 23ರಿಂದ ಆರಂಭಗೊಳ್ಳಲಿರುವ ಜಮ್ಮು- ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಆಡಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಸೋತ ಬಳಿಕ, ಆಟಗಾರರು ದೇಸಿ ಕ್ರಿಕೆಟ್‌ಗೆ ಪ್ರಾಮುಖ್ಯತೆ ನೀಡಬೇಕು ಎಂದು ಬಿಸಿಸಿಐ ತಾಕೀತು ಮಾಡಿತ್ತು. ಇನ್ನು, ಬಿಸಿಸಿಐ ತಾಕೀತು ಮಾಡಿದ್ದಕ್ಕೆ ರೋಹಿತ್ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದರು. ನಿರಂತರ ಕ್ರಿಕೆಟ್‌ನಿಂದ ಆಗಾಗ ಬಿಡುವು ಅಗತ್ಯ ಎಂದ ರೋಹಿತ್‌, ಸದ್ಯ ಭಾರತ ತಂಡದಲ್ಲಿರುವ ಯಾರೊಬ್ಬರೂ ದೇಸಿ ಕ್ರಿಕೆಟನ್ನು ಕಡೆಗಣಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟ! ಕನ್ನಡಿಗನಿಗೆ ನಿರಾಸೆ

ಕೊಹ್ಲಿ, ರಾಹುಲ್ ಅಲಭ್ಯ: ಜನವರಿ 23ರಿಂದ ರಣಜಿ ಪಂದ್ಯಗಳು ಪುನಾರಂಭಗೊಳ್ಳಲಿದ್ದು, ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಆಡುವುದಿಲ್ಲ ಎಂದು ತಿಳಿದುಬಂದಿದೆ. ಕೊಹ್ಲಿ ಕತ್ತು ನೋವಿನಿಂದ ಬಳಲುತ್ತಿದ್ದರೆ, ರಾಹುಲ್ ಮೊಣಕೈ ನೋವಿಗೆ ತುತ್ತಾಗಿದ್ದಾರೆ.

Latest Videos
Follow Us:
Download App:
  • android
  • ios