ಅಂಗನವಾಡಿ ಸಹಾಯಕಿಯಿಂದ ಅಮಾನವೀಯ ಕೃತ್ಯ ನಡೆದಿದೆ. ದಲಿತ ಬಾಲಕ ಸವರ್ಣಿಯರ ಅಂಗನವಾಡಿಗೆ ಹೋಗಿದ್ದಕ್ಕೆ ಬಾಲಕನ ಮೇಲೆ ಬಿಸಿ ಸೌಟಿನಿಂದ ಹಲ್ಲೆ ಮಾಡಿದ್ದಾರೆ.

ಚಾಮರಾಜನಗರ (ನ.21): ಅಂಗನವಾಡಿ ಸಹಾಯಕಿಯಿಂದ ಅಮಾನವೀಯ ಕೃತ್ಯ ನಡೆದಿದೆ. ದಲಿತ ಬಾಲಕ ಸವರ್ಣಿಯರ ಅಂಗನವಾಡಿಗೆ ಹೋಗಿದ್ದಕ್ಕೆ ಬಾಲಕನ ಮೇಲೆ ಬಿಸಿ ಸೌಟಿನಿಂದ ಹಲ್ಲೆ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೂರೂವರೆ ವರ್ಷದ ಬಾಲಕ ಹಾರ್ದಿಕ್​ ಗುತ್ತಿಗೆಗೆ ಅಂಗನವಾಡಿ ಸಹಾಯಕಿ ಶಿವಮಲ್ಲಮ್ಮ ಬಿಸಿ ಸೌಟಿನಿಂದ ಹೊಡೆದಿದ್ದು ಗಂಭೀರ ಗಾಯಗೊಂಡಿದ್ದಾನೆ.

ಚಾಮರಾಜನಗರ ತಾಲೂಕಿನ ಕೊಡಿಮೋಳೆ ಬಸವಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿನ್ನೆ ಅಂಗನವಾಡಿ ಅಂಗಳದಲ್ಲಿ ಆಡವಾಡುತ್ತಿದ್ದ ಬಾಲಕ ಹಾರ್ದಿಕ್ ಪಕ್ಕದ ಅಂಗನವಾಡಿಗೆ ಹೋಗಿದ್ದ. ಇದರಿಂದ ಸಿಟ್ಟಿಗೆದ್ದ ಶಿವಮಲ್ಲಮ್ಮ, ಬಿಸಿ ಸೌಟಿನಿಂದ ಹಾರ್ದಿಕ್ ಮೇಲೆ ಹಲ್ಲೆ ನಡೆಸಿದ್ದಾರೆ. ಆಕ್ರೋಶಗೊಂಡ ಹಾರ್ದಿಕ್ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ರಾಮಸಮುದ್ರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.