ನಿರೂಪಕ ಚಂದನ್ ಪತ್ನಿಯಿಂದ ಕೊಲ್ಲಲ್ಪಟ್ಟ ಮಗ ತುಷಾರ್ ಕಣ್ಣುಗಳನ್ನ ದಾನ ಮಾಡಲು ಕುಟುಂಬದ ನಿರ್ಧಾರ
ಬೆಂಗಳೂರು(ಮೇ.31) ಅಪಘಾತದಲ್ಲಿ ಮೃತಪಟ್ಟ ನಿರೂಪಕ ಚಂದನ್ ಪತ್ನಿ ಮನನೊಂದು ಮಗನನ್ನ ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದೀಗ ತಾಯಿಯಿಂದ ಕೊಲ್ಲಲ್ಪಟ್ಟ 13 ವರ್ಷದ ತುಷಾರ್ ಕಣ್ಣುಗಳನ್ನ ದಾನ ಮಾಡಲು ಚಂದನ್ ಕುಟುಂಬ ನಿರ್ಧರಿಸಿದೆ. ಕಳೆದ 24 ರಂದು ಚಂದನ್ ದಾವಣೆಗೆರೆ ಸಮೀಪ ಕಾರು ಅಪಘಾತದಲ್ಲಿ ಮುೃತಪಟ್ಟಿದ್ದರು. ಇದರಿಂದ ಮನನೊಂದ ಪತ್ನಿ ವೀಣಾ ಇಂದು ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ವೀಣಾ ಪರಿಸ್ಥಿತಿ ಗಂಭೀರವಾಗಿದ್ದು, ಹೆಬ್ಬಾಳ ಖಾಸಗಿ ಆಸ್ಪತ್ರೆಯಿಂದ ಇದೀಗ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಅಪಘಾತದಲ್ಲಿ ಮೃತಪಟ್ಟ ನಿರೂಪಕ ಚಂದನ್ ಪತ್ನಿ ಆತ್ಮಹತ್ಯೆಗೆ ಯತ್ನ
ಆಸಿಡ್ ಕುಡಿದು ಅಸ್ವಸ್ಥಳಾಗಿರುವ ಚಂದನ್ ಪತ್ನಿ ವೀಣಾ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ನಿಮಾನ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇದೀಗ ವೀಣಾಗೆ ಚಿಕಿತ್ಸೆ ನೀಡಲಾಗುತ್ತಿದೆ.
ಭೀಕರ ಅಪಘಾತ : ನಿರೂಪಕ ಚಂದನ್ ಸಾವು
