ಕಾರು ಅಪಘಾತದಲ್ಲಿ ಮೃತಪಟ್ಟ ನಿರೂಪಕ ಚಂದನ್ ಪತ್ನಿ ಆತ್ಮಹತ್ಯೆಗೆ ಯತ್ನ
ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದ ನಿರೂಪಕ ಚಂದನ್ ಪತ್ನಿ ಮಗನ ಕತ್ತು ಕೊಯ್ದು ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾರೆ
ಬೆಂಗಳೂರು(ಮೇ.31) ಖಾಸಗಿ ವಾಹಿನಿ ನಿರೂಪಕ ಚಂದನ್ ಇತ್ತೀಚೆಗೆ ಅಫಘಾತದಲ್ಲಿ ಮೃತಪಟ್ಟ ಹಿನ್ನಲೆಯಲ್ಲಿ ಮನನೊಂದು ಪತ್ನಿ ವೀಣಾ(38) ಮಗನ ಕತ್ತು ಕೊಯ್ದು ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯ ಮನೆಯಲ್ಲಿ ಚಂದನ್ ಪತ್ನಿ ವೀಣಾ ತಮ್ಮ 13 ವರ್ಷದ ಮಗ ತುಷಾರ್ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ. ಬಳಿಕ ವೀಣಾ ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ಆಸಿಡ್ ಕುಡಿದಿರುವ ವೀಣಾ ಅವರನ್ನ ತಕ್ಷಣವೇ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇನ್ನು ದೊಡ್ಡಬಳ್ಖಾಪುರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ 24 ನೇ ತಾರೀಕು ದಾವಣಗೆರೆ ಬಳಿ ಕಾರು ಅಪಘಾತದಲ್ಲಿ ಸಾವನ್ನಪಿದ್ದ ನಿರೂಪಕ ಚಂದನ್ ಸಾವನ್ನಪ್ಪಿದ್ದರು. ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಚಂದನ್ ಹಾಗೂ ಕಾರಿನಲ್ಲಿ ಸಂತೋಷಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಚಂದನ್ ಉದಯ ಮ್ಯೂಸಿಕ್, ಕಸ್ತೂರಿ ಸೇರಿದಂತೆ ವಿವಿಧ ಖಾಸಗಿ ವಾಹಿನಿಗಳಲ್ಲಿ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದರು. ಅತ್ಯಂತ ಸುಲಲಿತವಾಗಿ ಕನ್ನಡ ಮಾತನಾಡುತ್ತಿದ್ದ ಅವರು ಕರ್ನಾಟಕದಾದ್ಯಂತ ಮನೆ ಮಾತಾಗಿದ್ದರು.