ಅತಿ ಹೆಚ್ಚು ಶಿಳ್ಳೆ, ಚಪ್ಪಾಳೆ ಬಿದ್ದಿದ್ದು ನೂತನ ಕೇಂದ್ರ ಸಚಿವಗೆ ಅನಂತ್ ಹೆಗಡೆಗೆ ಫುಲ್ ಡಿಮ್ಯಾಂಡ್!

ಬೆಂಗಳೂರು: ಮಾತನಾಡಿದ್ದು ಕೇವಲ ಎರಡು ನಿಮಿಷವಾದರೂ ಇತರೆಲ್ಲಾ ನಾಯಕರಿಗಿಂತ ಕಾರ್ಯಕರ್ತರಿಂದ ಹೆಚ್ಚಿನ ಪ್ರಮಾಣದ ಶಿಳ್ಳೆ, ಕೇಕೆ, ಕರತಾಡನ ಗಳಿಸಿದ್ದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ರಾಜ್ಯದ ಪ್ರಮುಖ ನಾಯಕರು ಭಾಗವಹಿಸಿದ್ದರು. ಆದರೆ, ಎಲ್ಲಾ ನಾಯಕರಿಗಿಂತ ಅನಂತಕುಮಾರ್ ಹೆಗಡೆ ಅವರ ಹೆಸರು ಹೇಳಿದಾಗ ಮತ್ತು ಅವರು ಭಾಷಣ ಮಾಡುವ ವೇಳೆ ಜನರ ಶಿಳ್ಳೆ, ಚಪ್ಪಾಳೆ ಕೇಳಿಸಿತು. ಸ್ವಾಗತ ಭಾಷಣದ ವೇಳೆ ಅನಂತಕುಮಾರ್ ಹೆಗಡೆ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಜನರು ಜೈಕಾರ ಕೂಗಿದರು.

ಬೇರೆ ನಾಯಕರು 15 ನಿಮಿಷಗಳಿಗಿಂತ ಹೆಚ್ಚಾಗಿ ಮಾತನಾಡಿದರೂ ಜೈಕಾರ ಕೇಳಿಬರಲಿಲ್ಲ. ಆದರೆ, ಅನಂತಕುಮಾರ್ ಭಾಷಣ ಮಾಡಿದ್ದು ಎರಡು ನಿಮಿಷ ಮಾತ್ರವಾದರೂ ಜನರು ಭಾರೀ ಶಿಳ್ಳೆ ಹೊಡೆದು ಕರಾಡತನ ಮೊಳಗಿತು.

ಹೆಗಡೆ ಮಾತನಾಡಿ, ನಿದ್ದೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನರ ಕಣ್ಣೀರು ಗೊತ್ತಿಲ್ಲ. ಸಿದ್ದಣ್ಣ ಅವರನ್ನು ಎಬ್ಬಿಸಬೇಕಿದೆ. ಸಭ್ಯತೆ ಇಲ್ಲದಿದ್ದರೆ ರಾಜಕಾರಣ ಮಾಡಬಾರದು. ಅವರು ರಾಜಕಾರಣಕ್ಕೆ ನಾಲಾಯಕ್ ಆಗಿದ್ದಾರೆ. ಇತಿಹಾಸ, ಪರಂಪರೆ ಅರಿವಿರಬೇಕು. ಆದರೆ, ಸಿದ್ದರಾಮಯ್ಯಗೆ ಅದು ಇಲ್ಲ ಎಂದು ಟೀಕಿಸಿದರು.