ಕಾಗೇರಿಗೆ ಅನಂತ್ ಕುಮಾರ್ ಹೆಗಡೆ ಚಪ್ಪಲಿ ಏಟು

Anand Asnotikar Slams Anant Kumar Hegde
Highlights

ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅನಂತಕುಮಾರ್‌ ಹೆಗಡೆ ಚಪ್ಪಲಿಯಿಂದ ಹೊಡೆದಿದ್ದಾರೆ. ಡಾಕ್ಟರ್‌ ಮೇಲೆ ಹಲ್ಲೆ ಮಾಡಿದ್ದಾರೆ. ಅವರಿಗೆ ಸಂಸ್ಕಾರ ಎನ್ನುವುದೇ ಇಲ್ಲ ಎಂದು ಜೆಡಿಎಸ್‌ ಮುಖಂಡ ಆನಂದ್‌ ಅಸ್ನೋಟಿಕರ್‌ ಹೇಳಿದ್ದಾರೆ.

ಕಾರವಾರ :  ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಅವರನ್ನು ಮಾಜಿ ಸಚಿವ, ಜೆಡಿಎಸ್‌ ಮುಖಂಡ ಆನಂದ್‌ ಅಸ್ನೋಟಿಕರ್‌ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. 

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅನಂತಕುಮಾರ್‌ ಚಪ್ಪಲಿಯಿಂದ ಹೊಡೆದಿದ್ದಾರೆ. ಡಾಕ್ಟರ್‌ ಮೇಲೆ ಹಲ್ಲೆ ಮಾಡಿದ್ದಾರೆ. ಅವರಿಗೆ ಸಂಸ್ಕಾರ ಎನ್ನುವುದೇ ಇಲ್ಲ. 

ಏನೇನೋ ಮಾತನಾಡುತ್ತಾರೆ ಎಂದರು. ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಯಾರು ಬಾವುಟ ಹಾರಿಸಿದ್ದೋ ಏನೋ? ಅದನ್ನೇ ಹಿಡಿದುಕೊಂಡು ತಾನು ಹಾಗೆ ಮಾಡಿದ್ದೇನೆ. ಹೀಗೆ ಮಾಡಿದ್ದೇನೆ ಎಂದು ಬಿಂಬಿಸಿದ್ದಾನೆ. 

ಅಮಿತ್‌ ಶಾ ಹೇಗೋ ಸಚಿವರನ್ನಾಗಿ ಮಾಡಿದರು. ಈಗ ಅವರಿಗೂ ಗೊತ್ತಾಗಿದೆ. ಅವರದೆ ಪಕ್ಷದ ಕೇಂದ್ರ ಸಚಿವ ಅನಂತಕುಮಾರ್‌ ಸಹ ಪರೋಕ್ಷವಾಗಿ ಇವರ ಬಗ್ಗೆ ಮಾತುಗಳನ್ನಾಡಿದ್ದಾರೆ ಎಂದು ತಿಳಿಸಿದರು. 

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನಿಂದ ಸ್ಪರ್ಧಿಸುವ ಇಂಗಿತವನ್ನು ಆನಂದ್‌ ಅಸ್ನೋಟಿಕರ್‌ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡು ಅಭ್ಯರ್ಥಿಯನ್ನು ಕಣಕ್ಕಿಳಿಸಿದಲ್ಲಿ ಗೆಲವು ನಿಶ್ಚಿತ ಎಂದರು.

loader