ಉಭಯ ದೇಶಗಳು ರಕ್ಷಣೆ, ಇಂಧನ, ವಿದ್ಯುತ್, ಬಾಹ್ಯಾಕಾಶ ಸೇರಿದಂತೆ 16 ಒಪ್ಪಂದಗಳಿಗೆ ಸಹಿ ಹಾಕಿದವು. ಬಳಿಕ ಕೂಡಂಕುಲಂನ 3 ಮತ್ತು 4 ನೇ ಘಟಕಕ್ಕೆ ಚಾಲನೆ ನೀಡಿದರು.

ನವದೆಹಲಿ (ಅ.15): ಬ್ರಿಕ್ಸ್ ಶೃಂಗಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಿಯೋಗ ಮಟ್ಟದ ಮಾತುಕತೆ ನಡೆಸಿದರು.

ಉಭಯ ದೇಶಗಳು ರಕ್ಷಣೆ, ಇಂಧನ, ವಿದ್ಯುತ್, ಬಾಹ್ಯಾಕಾಶ ಸೇರಿದಂತೆ 16 ಒಪ್ಪಂದಗಳಿಗೆ ಸಹಿ ಹಾಕಿದವು. ಬಳಿಕ ಕೂಡಂಕುಲಂನ 3 ಮತ್ತು 4 ನೇ ಘಟಕಕ್ಕೆ ಚಾಲನೆ ನೀಡಿದರು.

ರಷ್ಯಾವನ್ನು ಹಳೆಯ ಸ್ನೇಹಿತ ಎಂದು ಬಣ್ಣಿಸಿದ ಮೋದಿ, ನಾವು ವಾರ್ಷಿಕ ಸೇನಾ ಸಮ್ಮೇಳನದಲ್ಲಿ ಒಟ್ಟಿಗೆ ಕೆಲಸ ಮಾಡಲಿದ್ದು ಅದು ಉಭಯ ದೇಶಗಳ ಹೂಡಿಕೆದಾರರನ್ನು ಉತ್ತೇಜಿಸುವುದು ಎಂದು ಮೋದಿ ಹೇಳಿದ್ದಾರೆ.