Asianet Suvarna News Asianet Suvarna News

ಜಯ ಮರು ಅಂತ್ಯಸಂಸ್ಕಾರಕ್ಕೆ ಅಮೃತಾ ಹೈಕೋರ್ಟ್'ಗೆ ರಿಟ್ ಅರ್ಜಿ

ಜಯಲಲಿತಾ ಅವರ ಕುಟುಂಬದ ಸದಸ್ಯೆ ಎಂದು ಅರ್ಜಿ ಸಲ್ಲಿಸಿರುವ ಈಕೆ ವೈಷ್ಣವ ಅಯ್ಯಂಗಾರ್ ಸಂಪ್ರದಾಯದಂತೆ  ಮರು ಅಂತ್ಯಸಂಸ್ಕಾರಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.

Amrutha is jayalalithas daughter lawyer claims

ಚೆನ್ನೈ(ಡಿ.21): ಜಯಲಲಿತಾ ಮಗಳು ಎಂದು ಹೇಳಿಕೊಂಡು ಸುಪ್ರೀಂ ಕೋರ್ಟ್'ಗೆ ಅರ್ಜಿ ಸಲ್ಲಿಸಿದ್ದ ಅಮೃತ ಎಂಬುವವರು ಜಯಲಲಿತಾ ಮರು ಅಂತ್ಯ ಸಂಸ್ಕಾರ ನಡೆಸಬೇಕೆಂದು ಮದ್ರಾಸ್ ಹೈಕೋರ್ಟ್'ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಜಯಲಲಿತಾ ಅವರ ಕುಟುಂಬದ ಸದಸ್ಯೆ ಎಂದು ಅರ್ಜಿ ಸಲ್ಲಿಸಿರುವ ಈಕೆ ವೈಷ್ಣವ ಅಯ್ಯಂಗಾರ್ ಸಂಪ್ರದಾಯದಂತೆ  ಮರು ಅಂತ್ಯಸಂಸ್ಕಾರಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಮದ್ರಾಸ್ ಹೈಕೋರ್ಟ್'ನಲ್ಲಿ ವಿಚಾರಣೆ ನಡೆಯುತ್ತಿದೆ.

ನಾವು ಪ್ರಚಾರಕ್ಕಾಗಿ ಹೈಕೋರ್ಟ್'ನಲ್ಲಿ ಅರ್ಜಿ ಸಲ್ಲಿಸಿ. ಜಯಲಲಿತಾ ಮಗಳು ಎಂಬುದಕ್ಕೆ ನಮ್ಮಲ್ಲಿ ಸಾಕ್ಷಿಗಳಿವೆ. ಜಯಲಲಿತಾ ಅವರ ಮಗಳು ಅಮೃತ ಜೊತೆ ನಿತ್ಯ ಸಂಪರ್ಕದಲ್ಲಿರುತ್ತಿದ್ದರು. ಈ ಬಗ್ಗೆ ಮೊಬೈಲ್ ಕರೆ ದಾಖಲೆಯನ್ನು ಕೋರ್ಟ್'ಗೆ ಸಲ್ಲಿಸಲಾಗಿದೆ. ಅಲ್ಲದೆ ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ಅಮೃತಾಗೆ ಆಸ್ಪತ್ರೆಗೆ ಹೋಗಲು ಅವಕಾಶ ನೀಡಿರಲಿಲ್ಲ  ಎಂದು' ಅಮೃತ ಪರ ವಕೀಲರು ವಾದ ಮಂಡಿಸಿದ್ದಾರೆ.

ಈ ಸಂದರ್ಭದಲ್ಲಿ ಡಿಎನ್​ಎ ಪರೀಕ್ಷೆ ನಡೆಸಲು ಆದೇಶಿಸಬಹುದೇ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಇದಕ್ಕೆ ಮರುವಾದ ಮಂಡಿಸಿದ ಸರ್ಕಾರಿ ವಕೀಲರು ಅಮೃತಾ ಸುಳ್ಳು ಹೇಳುತ್ತಿದ್ದು ಅವರ ಬಳಿ ಯಾವುದೇ ಸಾಕ್ಷಿ ಇಲ್ಲವೆಂದು ತಿಳಿಸಿದರು.

Latest Videos
Follow Us:
Download App:
  • android
  • ios