Asianet Suvarna News Asianet Suvarna News

BigB ಮನೆಯಲ್ಲಿ ಬರ್ತ್‌ಡೆ ಸೆಲೆಬ್ರೇಷನ್, ಸವಾಲಿಗೆ ಸಜ್ಜಾದ IPL ಚಾಂಪಿಯನ್: ಅ.11ರ ಟಾಪ್ 10 ಸುದ್ದಿ!

ಉಪಚುನಾವಣೆಗೆ ರೇಪ್ ಆರೋಪಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದನ್ನು ವಿರೋಧಿಸಿದ ಮಹಿಳಾ ಕಾರ್ಯಕರ್ತೆ ಮೇಲೆ ಹಲ್ಲೆ ನಡೆಸಲಾಗಿದೆ. ಹಲವು ಅಡೆ ತಡೆಗಳ ನಡುವೆಯೂ ಮೋದಿ ಮೇಲಿನ ದೇಶವಾಸಿಗಳ ವಿಶ್ವಾಸ ಮಾತ್ರ ಕಡಿಮೆಯಾಗಿಲ್ಲ. ತೇಜಸ್ವಿ ಸೂರ್ಯ ಮೇಲೆ ಹಲ್ಲೆ ಖಂಡಿಸಿ ಬಿಜೆಪಿಗರ ಪ್ರತಿಭಟನೆ. ಅಮಿತಾಬ್ ಬಚ್ಚನ್‌ಗೆ ಹುಟ್ಟು ಹಬ್ಬದ ಸಂಭ್ರಮ, ಮುಂಬೈ ಇಂಡಿಯನ್ಸ್‌ಗೆ ಡೆಲ್ಲಿ ಸವಾಲು ಸೇರಿದಂತೆ ಅಕ್ಟೋಬರ್ 11ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

amitabh bachchan birthday to Mumbai Indians top 10 news of october 11 ckm
Author
Bengaluru, First Published Oct 11, 2020, 5:07 PM IST
  • Facebook
  • Twitter
  • Whatsapp

ಉಪಚುನಾವಣೆ: ಅತ್ಯಾಚಾರದ ಆರೋಪಿಗೆ ಟಿಕೆಟ್ ವಿರೋಧಿಸಿದ ಮಹಿಳಾ ಕಾರ್ಯಕರ್ತೆ ಮೇಲೆ ಹಲ್ಲೆ...

amitabh bachchan birthday to Mumbai Indians top 10 news of october 11 ckm

ಉಪಚುನಾವಣೆಗೆ ರೇಪ್ ಆರೋಪಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇದನ್ನ ವಿರೋಧಿಸಿದ ಮಹಿಳಾ ಕಾರ್ಯಕರ್ತೆ ಮೇಲೆಯೇ ಕೈ ನಾಯಕರು ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಮೋದಿ ಮೇಲೆ ಶೇ.69 ಜನರಿಗೆ ವಿಶ್ವಾಸ!...

amitabh bachchan birthday to Mumbai Indians top 10 news of october 11 ckm

ಕೊರೋನಾ ವೈರಸ್‌ ತಾಂಡವ, ಅದರ ಪರಿಣಾಮವಾಗಿ ದೇಶದ ಆರ್ಥಿಕತೆ ಕುಸಿತ, ಮತ್ತೊಂದೆಡೆ ಚೀನಾದ ತಗಾದೆ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಮೇಲಿನ ದೇಶವಾಸಿಗಳ ವಿಶ್ವಾಸ ಮಾತ್ರ ಕಡಿಮೆಯಾಗಿಲ್ಲ ಎಂಬುದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ದೇಶದ ಮೂರನೇ ಎರಡರಷ್ಟುಮಂದಿ ಇವತ್ತಿಗೂ ಮೋದಿ ಅವರ ಮೇಲೆ ತಮಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಗುಡ್‌ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ...!...

amitabh bachchan birthday to Mumbai Indians top 10 news of october 11 ckm

ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ ರಾಜ್ಯದ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಗುಡ್ ನ್ಯೂಸ್ ನೀಡಿದೆ.

IPL 2020: ಹಾಲಿ ಚಾಂಪಿಯನ್ ಮುಂಬೈಗಿಂದು ಬಲಿಷ್ಠ ಡೆಲ್ಲಿ ಚಾಲೆಂಜ್..!...

amitabh bachchan birthday to Mumbai Indians top 10 news of october 11 ckm

13ನೇ ಆವೃತ್ತಿಯ ಐಪಿಎಲ್ ಟೂರ್ನಿಯ 26ನೇ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೆಣಸಲಿದೆ. 

ನಟಿ ಕಾಜಲ್ ಅಗರ್ವಾಲ್ ಬ್ಯಾಚುಲರ್ ಪಾರ್ಟಿ ಫೋಟೋಗಳು ಲೀಕ್; ಹೇಗಿತ್ತು ನೋಡಿ!...

amitabh bachchan birthday to Mumbai Indians top 10 news of october 11 ckm

ಅಕ್ಟೋಬರ್ 30ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನಟಿ ಕಾಜಲ್ ಅಗರ್ವಾಲ್‌ ಆಪ್ತ ಗೆಳೆಯರ ಜೊತೆ ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು...

Happy Birthday ಅಮಿತಾಭ್: 200ಕ್ಕೂ ಹೆಚ್ಚು ಸಿನಿಮಾ, Big Bಗೆ ಅತ್ಯಧಿಕ ಸಂಭಾವನೆ ತಂದುಕೊಟ್ಟ ಸಿನಿಮಾಗಳಿವು...

amitabh bachchan birthday to Mumbai Indians top 10 news of october 11 ckm

ಅಮಿತಾಭ್ ಬಚ್ಚನ್ ಈವರೆಗೆ 200ಕ್ಕಿಂತಲೂ ಹೆಚ್ಚು ಸಿನಿಮಾ ಮಾಡಿದ್ದಾರೆ. ನಟ ಸಿನಿಮಾಗಳಿಗೆ ಪಡೆದ ಸಂಭಾವನೆ ಎಷ್ಟು ಗೊತ್ತಾ..? ಇಲ್ಲಿ ನೋಡಿ

ತೇಜಸ್ವಿ ಸೂರ್ಯ ಮೇಲೆ ಹಲ್ಲೆ : ಬಿಜೆಪಿಗರ ಪ್ರತಿಭಟನೆ...

amitabh bachchan birthday to Mumbai Indians top 10 news of october 11 ckm

ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮೇಲಿನ ಹಲ್ಲೆ ಖಂಡಿಸಿ ಬಿಜೆಪಿಗರು ಪ್ರತಿಭಟನೆ ನಡೆಸಿದ್ದಾರೆ

4G ಸಪೋರ್ಟ್ ನೊಕಿಯಾ 215, ನೊಕಿಯಾ 225 ಫೋನ್ ಬಿಡುಗಡೆ!...

amitabh bachchan birthday to Mumbai Indians top 10 news of october 11 ckm

ಭಾರತದಲ್ಲಿ ಫೋನ್ ಕ್ರಾಂತಿ ಆರಂಭಗೊಂಡಿದ್ದೇ ನೊಕಿಯಾ ಮೊಬೈಲ್ ಮೂಲಕ. ಬಳಿಕ ಹಲವು ಕಂಪನಿಗಳು ಭಾರತದಲ್ಲಿ ಕಡಿಮೆ ಬೆಲೆಗೆ ಫೋನ್ ಬಿಡುಗಡೆ ಮಾಡಿದೆ. ಇದೀಗ ಸ್ಮಾರ್ಟ‌ಫೋನ್ ಜಮಾನ. ಇದರ ನಡುವೆ ನೊಕಿಯಾ ತನ್ನು ಮೊಬೈಲ್ ಫೋನ್ ಬೇಡಿಕೆ ಉಳಿಸಿಕೊಂಡಿದೆ. ಇದೀಗ ನೊಕಿಯಾ 4G ಸಪೋರ್ಟ್ ಮಾಡುವ 215 ಹಾಗೂ 225 ಮೊಬೈಲ್ ಫೋನ್ ಬಿಡುಗಡೆ ಮಾಡಿದೆ.

PF ಚಂದಾದಾರರಿಗೆ ದೀಪಾವಳಿಗೆ ಸಿಗಲಿದೆ ಸಿಹಿ!...

amitabh bachchan birthday to Mumbai Indians top 10 news of october 11 ckm

ನೌಕ​ರರ ಭವಿಷ್ಯ ನಿಧಿ ಮಂಡಳಿ (ಇ​ಪಿ​ಎ​ಫ್‌​ಒ) 2019-20ನೇ ಸಾಲಿನ ಶೇ.8.5 ಪಿಎಫ್‌ ಬಡ್ಡಿ ದರದ ಮೊದಲ ಕಂತನ್ನು ದೀಪಾ​ವಳಿ ವೇಳೆ ಚಂದಾ​ದಾ​ರ​ರಿಗೆ ನೀಡುವ ನಿರೀ​ಕ್ಷೆ​ಯಿದೆ.

ದುಬಾರಿ ಪೊರ್ಶೆ 911 ಕ್ಯಾರೆರಾ S ಕಾರು ಖರೀದಿಸಿದ ನಟ ಫಹದ್ ಫಾಸಿಲ್, ನಾಜ್ರಿಯಾ !...

amitabh bachchan birthday to Mumbai Indians top 10 news of october 11 ckm

ಮಲೆಯಾಳಂ ನಟ ಫಹದ್ ಫಾಸಿಲ್ ಹಾಗೂ ಪತ್ನಿ, ಖ್ಯಾತ ನಟಿ ನಾಜ್ರಿಯಾ ನಜೀಮ್ ಹೊಚ್ಚ ಹೊಸ ಪೊರ್ಶೆ 911 ಕ್ಯಾರೆರಾ S ಸೂಪರ್ ಕಾರು ಖರೀದಿಸಿದ್ದಾರೆ. ದುಬಾರಿ ಹಾಗೂ ಸ್ಪೋರ್ಟ್ಸ್ ಸೂಪರ್ ಕಾರು ಇದಾಗಿದ್ದು, ಬರೋಬ್ಬರಿ 1.84 ಕೋಟಿ ರೂಪಾಯಿ(ಎಕ್ಸ್ ಶೋ ರೂಂ) ಬೆಲೆ ಹೊಂದಿದೆ ಈ ಕಾರಿನ ವಿಶೇಷತೆ ಏನು, ಬಹುತೇಕ ಸೆಲೆಬ್ರೆಟಿಗಳು ಪೊರ್ಶೆ   911 ಕಾರಿನ ಮೊರೆ ಹೋಗುತ್ತಿರುವುದೇಕೆ? ಇಲ್ಲಿದೆ ವಿವರ.
 
Follow Us:
Download App:
  • android
  • ios