Asianet Suvarna News Asianet Suvarna News

ತೇಜಸ್ವಿ ಸೂರ್ಯ ಮೇಲೆ ಹಲ್ಲೆ : ಬಿಜೆಪಿಗರ ಪ್ರತಿಭಟನೆ

ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮೇಲಿನ ಹಲ್ಲೆ ಖಂಡಿಸಿ ಬಿಜೆಪಿಗರು ಪ್ರತಿಭಟನೆ ನಡೆಸಿದ್ದಾರೆ

BJP Workers Protest Against Attack On Tejasvi surya snr
Author
Bengaluru, First Published Oct 11, 2020, 11:28 AM IST

ಬೇಲೂರು (ಅ.11):  ಭಾರತೀಯ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಸಂಸದ ತೇಜಸ್ವಿಸೂರ್ಯ ಅವರ ಮೇಲೆ ಹಲ್ಲೆ ಪ್ರಕರಣ ಖಂಡಿಸಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾದ ವತಿಯಿಂದ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಯುವಮೋರ್ಚಾ ತಾಲೂಕು ಅಧ್ಯಕ್ಷ ನಂದಕುಮಾರ್‌, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸು ಕಂಡು ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಅಲ್ಲಿಗೆ ಭೇಟಿ ನೀಡಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸದ ಸಂದರ್ಭದಲ್ಲಿ ಕಾರ್ಯಕರ್ತರ ಮೇಲೆ ಹಾಗೂ ನಮ್ಮ ಅಧ್ಯಕ್ಷರ ಮೇಲೆ ನಾಡಬಾಂಬ್‌ ಸ್ಫೋಟಿಸಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಹೇಯ ಕೃತ್ಯವನ್ನು ಖಂಡಿಸಿದರು.

ಕುತೂಹಲದ ಕೇಂದ್ರವಾದ ಆರ್‌ ಆರ್ ನಗರ : ಫೈನಲ್ ಆಗಿಲ್ಲ ಬಿಜೆಪಿ ಅಭ್ಯರ್ಥಿ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಒಬ್ಬ ಮಹಿಳೆ ಎಂಬುದನ್ನು ಮರೆತು ರಕ್ಷಣೆ ನೀಡುವ ಬದಲು ಅವರೇ ಹಿಂಸಾತ್ಮಕ ಕೃತ್ಯಕ್ಕೆ ಕೈ ಹಾಕಿರುವುದು ನಾಚಿಕೆಗೇಡಿನ ಸಂಗತಿ. ತಕ್ಷಣವೇ ಈ ಸರ್ಕಾರದ ವಿತುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಯುವ ಮೋರ್ಚಾ ವತಿಯಿಂದ ಒತ್ತಾಯಿಸಿದರು.

ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ್‌ ಮಾತನಾಡಿ, ಗೂಂಡರಾಜ್ಯ ಎಂಬುದನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಅವರು ತೋರಿಸಿ ಕೊಟ್ಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣ ಸತ್ತುಹೋಗಿದೆ. ತಾಯಿಯ ಸ್ಥಾನದಲ್ಲಿ ನಿಂತು ಬುದ್ಧಿ ಹೇಳುವ ಅವರೇ ಇಂತಹ ಕೃತ್ಯಕ್ಕೆ ಬೆಂಬಲ ಕೊಟ್ಟಿರುವುದು ದುರಾದೃಷ್ಟಸಂಗತಿ ಎಂದರು.

ಬಿಜೆಪಿ ಜೊತೆ ಕೈ ಜೋಡಿಸಲು ಸಜ್ಜಾದ ಬಿಜೆಪಿ : ಅಚ್ಚರಿ ಹೇಳಿಕೆ? .

ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿನಯ್‌ ಮಾತನಾಡಿ, ಇಡೀ ದೇಶದಲ್ಲಿ ಎಲ್ಲಿಯೂ ಕಂಡರಿಯದ ಘಟನೆಗೆ ಮಮತಾ ಬ್ಯಾನರ್ಜಿಯವರ ಸರ್ಕಾರ ಕಾರಣವಾಗಿದೆ. ಅವರ ದೌರ್ಬಲ್ಯವನ್ನು ಮುಚ್ಚಿ ಹಾಕಲು ಗೂಂಡ ರೀತಿಯಲ್ಲಿ ವರ್ತಿಸುವುದು ನಿಜಕ್ಕೂ ಖಂಡನೀಯ. ಈ ಸರ್ಕಾರದ ಧೋರಣೆ ಖಂಡಿಸಿ ಉಪ ತಹಸೀಲ್ದಾರ್‌ ನಾಗರಾಜ್‌ ಮುಖಾಂತರ ಮನವಿ ಸಲ್ಲಿಸಿದರು.

Follow Us:
Download App:
  • android
  • ios