ನವದೆಹಲಿ(ಅ.11): ಭಾರತೀಯರು ಸದ್ಯ ಐಫೋನ್, ಚೀನಾ ಫೋನ್, ಸ್ಯಾಮ್ಸನ್ ಸೇರಿದಂತೆ ಹಲವು ಕಂಪನಿಗಳ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿದ್ದಾರೆ. ಆದರೆ ನೊಕಿಯಾ ಫೋನ್ ಮೇಲೆ ಎಲ್ಲಿಲ್ಲದ ಪ್ರೀತಿ ಇದ್ದೇ ಇದೆ. ಭಾರತದಲ್ಲಿ ಫೋನ್ ಕ್ರಾಂತಿ ಆರಂಭಿಸಲು ನೆರವಾದ ನೊಕಿಯಾ ನಂಬಿಕಸ್ಥ ಬ್ರಾಂಡ್ ಆಗಿದೆ. ಇದೀಗ ಜಾಗತಿಕ ಮಟ್ಟದಲ್ಲಿ ನೊಕಿಯಾ 4G ಸಪೋರ್ಟ್ ಮೊಬೈಲ್ ಫೋನ್ ಬಿಡುಗಡೆ ಮಾಡಿದೆ.

ಭಾರತದ ಮೊದಲ ಮೊಬೈಲ್‌ ಕರೆಗೆ 25 ವರ್ಷ ತುಂಬಿತು!

ನೊಕಿಯಾ 215 ಹಾಗೂ ನೊಕಿಯಾ 225 ಮೊಬೈಲ್ ಫೋನ್ 4G ಸಪೋರ್ಟ್ ಹಾಗೂ VoLTE ಹಾಗೂ HD ಕಾಲ್ಸ್ ಸಪೋರ್ಟ್ ಮಾಡಲಿದೆ.  LED ಫ್ಲಾಶ್ ಲೈಟ್,  ಮೈಕ್ರೋSD ಕಾರ್ಡ್ ಸಪೋರ್ಟ್  ಹಾಗೂ FM ರೇಡಿಯೋ ಫೀಚರ್ಸ್ ಹೊಂದಿದೆ.

ನೊಕಿಯಾ 225 ಫೋನ್  VGA ಕ್ಯಾಮರಾ ಹೊಂದಿದೆ. ಆದರೆ ನೊಕಿಯಾ 215 ಕ್ಯಾಮರ ಆಯ್ಕೆ ಹೊಂದಿಲ್ಲ.  215 ಫೋನ್ ಬ್ಲಾಕ್ ಹಾಗೂ ಗ್ರೀನ್ ಕಲರ್ ಆಯ್ಕೆ ನೀಡಿದೆ. ಇನ್ನು 225 ಫೋನ್ ಬ್ಲಾಕ್, ಬ್ಲೂ ಹಾಗೂ ಗೋಲ್ಡ್ ಕಲರ್ ಆಯ್ಕೆ ನೀಡಿದೆ.

5 ಕ್ಯಾಮೆರಾವುಳ್ಳ Nokia 9 PureView ಬಿಡುಗಡೆ; ಫೀಚರ್ಸ್ ಮತ್ತು ಬೆಲೆ

ನೊಕಿಯಾ 225 ಫೋನ್ ಬೆಲೆ 3,800 ರೂಪಾಯಿ ಹಾಗೂ 215 ಫೋನ್ ಬೆಲೆ 3,150 ರೂಪಾಯಿ. ಸದ್ಯ ನೊಕಿಯಾ ನೂತನ ಫೋನ್ ಚೀನಾದಲ್ಲಿ ಬಿಡುಗಡೆಯಾಗಿದೆ. ಅಕ್ಟೋಬರ್ 14 ರಿಂದ ಮಾರಾಟ ಆರಂಭಗೊಳ್ಳಲಿದೆ. ಶೀಘ್ರದಲ್ಲೇ ಭಾರತದಲ್ಲೂ ನೊಕಿಯಾ 215 ಹಾಗೂ 225 ಫೋನ್ ಬಿಡುಗಡೆಯಾಗಲಿದೆ.