ಶಬರಿಮಲೆ[ಜ.04]: ಬಿಂದು ಹಾಗೂ ಕನಕದುರ್ಗಾ ಎಂಬ ಇಬ್ಬರು ಮಹಿಳೆಯರು ಪೊಲೀಸ್ ಬಿಗಿ ಭದ್ರತೆಯಲ್ಲಿ ಶಬರಿಮಲೆ ಅಯ್ಯಪ್ಪ ದರ್ಶನ ಪಡೆದಿದ್ದರು. ಇದಾದ ಬಳಿಕ ಕೇರಳದಾದ್ಯಂತ ಭಾರೀ ಪ್ರತಿಭಟನೆ ನಡೆದಿದ್ದು, ಇದು ಹಿಂಸಾಚಾರಕ್ಕೆ ತಿರುಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಮತ್ತೊಮ್ಮ ಮಹಿಳೆ ಶಬರಿಮಲೆ ಪ್ರವೇಶಿಸಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.

ರೋಗಿಗಳಂತೆ ಕರೆತಂದು ಬಿಂದು, ಕನಕೆಗೆ ಅಯ್ಯಪ್ಪ ದರ್ಶನ!

ಶ್ರೀಲಂಕಾ ಮೂಲಕ ಶಶಿಕಲಾ ಎಂಬ ಮಹಿಳೆಯೊಬ್ಬರು ನಿನ್ನೆ ರಾತ್ರಿ ಸುಮಾರು 9.30 ರ ವೇಳೆಗೆ ಪೋಲಿಸ್ ಭದ್ರತೆಯಲ್ಲಿ ಶಬರಿಮಲೆ ಪ್ರವೇಶಿಸಿ, ಅಯ್ಯಪ್ಪ ದರ್ಶನ ಪಡೆದಿದ್ದಾರೆ. ಮಹಿಳೆಯ ಪಾಸ್ ಪೋರ್ಟ್ ನಲ್ಲಿ 46 ವಯಸ್ಸು ಎಂದು ದಾಖಲಾಗಿದೆ. ಆದರೆ ಮಹಿಳೆ ಮಾತ್ರ ತನಗೆ 46 ವರ್ಷವಾದರೂ ಋತು ಸ್ರಾವ ನಿಂತಿದೆ ಎಂದು ವೈದ್ಯಕೀಯ ದಾಖಲೆಗಳನ್ನು ಮುಂದಿಟ್ಟಿದ್ದಾರೆ.

ಶಬರಿಮಲೆ ಪ್ರವೇಶಿಸಿದ ಬಿಂದು ಮತ್ತು ಕನಕದುರ್ಗ ಯಾರು? ಇಲ್ಲಿದೆ ಸ್ಫೋಟಕ ಮಾಹಿತಿ

ಸುಪ್ರೀಂ ಕೋರ್ಟ್ ಎಲ್ಲಾ ವಯೋಮಾನದ ಮಹಿಳೆಯರು ಶಬರಿಮಲೆಗೆ ಪ್ರವೇಶಿಸಬಹುದೆಂಬ ತೀರ್ಪು ನೀಡಿದ್ದರೂ, ಅಯ್ಯಪ್ಪ ಸ್ವಾಮಿಯ ಭಕ್ತರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಹಲವಾರು ಮಂದಿ ಮಹಿಳೆಯರು ಶಬರಿಮಲೆ ಆವರಣದವರೆಗೆ ತಲುಪಿದ್ದರೂ, ದೇಗುಲ ಪ್ರವೇಶಿಸಲಾಗದೆ ಮರಳಿದ್ದರು. ಆದರೆ ಜ. 2 ರಂದು ಮುಂಜಾನೆ ಸುಮಾರು 03.45ಕ್ಕೆ ಇಬ್ಬರು ಮಹಿಳೆಯರು ಯಾರೊಬ್ಬರಿಗೂ ತಿಳಿಯದೆ ದೇಗುಲ ಪ್ರವೇಶಿಸಿದ್ದರು. ಇದಾದ ಬಳಿಕ ಭಕ್ತರ ಆಕ್ರೋಶ ಭುಗಿಲೆದ್ದಿತ್ತು.