ಬೆಂಗಳೂರು(ಸೆ.17): ಜೀವ ಉಳಿಸಬೇಕಿದ್ದ ಆಂಬುಲೆನ್ಸ್ ವಾಹನ ಒನ್​ವೇನಲ್ಲಿ ಬಂದು ಅಮಾಯಕನ ಜೀವ ತೆಗೆದ ಘಟನೆ ಬೆಂಗಳೂರಿನ ಬಿಇಎಲ್ ಸರ್ಕಲ್ ಲೊಟ್ಟೆಗೊಲ್ಲಹಳ್ಳಿ ಬಳಿ ನಡೆದಿದೆ.

ಒನ್ ವೇನಲ್ಲಿ ವೇಗವಾಗಿ ಬಂದ ಆಂಬುಲೆನ್ಸ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್​ ಸವಾರ ಎ.ಎನ್​ ಕುಮಾರ್​ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಆಂಬುಲೆನ್ಸ್ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಸ್ಥಳಕ್ಕೆ ಜಾಲಹಳ್ಳಿ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಜಾಲಹಳ್ಳಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.