Asianet Suvarna News Asianet Suvarna News

ಅಭಿಮಾನಿಗಳೇ ಗಮನಿಸಿ: ಅಂತಿಮ ದರ್ಶನ ಸ್ಟುಡಿಯೋನಲ್ಲಲ್ಲ, ಸ್ಟೇಡಿಯಂನಲ್ಲಿ

ಅಂಬಿ ನಿಧನದ ಸುದ್ದಿ ಕೇಳಿ ಅವರ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಅಂಬಿ ಅಂತಿಮ ದರ್ಶನ ಪಡೆಯಲು ರಾಜ್ಯದ ನಾನಾ ಮೂಲೆಗಳಿಂದ ಜನರು ನಗರಕ್ಕೆ ಆಗಮಿಸುತ್ತಿದ್ದಾರೆ. ಸಾಕಷ್ಟು ಅಭಿಮಾನಿಗಳು ಗೊಂದಲಕ್ಕೊಳಗಾಗಿ ಕಂಠೀರವ ಸ್ಟೇಡಿಯಂಗೆ ಹೋಗುವ ಬದಲು ಕಂಠೀರವ ಸ್ಟುಡಿಯೋಕ್ಕೆ ಹೋಗುತ್ತಿದ್ದಾರೆ.

Ambreesh dead body to be kept in Kanteerava Stadium
Author
Bengaluru, First Published Nov 25, 2018, 8:29 AM IST

ಬೆಂಗಳೂರು[ನ.25]: ಕಲಿಯುಗದ ಕರ್ಣ ಖ್ಯಾತಿಯ ಅಂಬರೀಷ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಕಂಠೀರವ ಸ್ಟೇಡಿಯಂನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸುಮಲತಾ ಅಂಬರೀಷ್ ನೆನಪಿಸಿಕೊಂಡ ಲವ್‌ ಸ್ಟೋರಿ

ಶನಿವಾರ ತಡರಾತ್ರಿ ಅಂಬಿ ವಿಕ್ರಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಇದೀಗ ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಅವರ ನಿವಾಸದಿಂದ ಚಾಮರಾಜನಗರದಲ್ಲಿರುವ ಕಲಾವಿದರ ಸಂಘದಲ್ಲಿ ಕೆಲಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ. ಆ ಬಳಿಕ ಕಂಠೀರವ ಸ್ಟೇಡಿಯಂಗೆ ಕೊಂಡ್ಯೊಯಲಾಗುತ್ತದೆ. ಕಂಠೀರವ ಸ್ಟುಡಿಯೋಗೆ ಹೋಗುವವರು ತಮ್ಮ ವಾಹನಗಳನ್ನು ಫ್ರೀಡಂ ಪಾರ್ಕ್’ನಲ್ಲೇ ಪಾರ್ಕ್ ಮಾಡಲು ಪೊಲೀಸರು ಸೂಚಿಸಿದ್ದಾರೆ.

 

ಅಂಬಿ ನಿಧನ: 2 ದಿನ ಮಧ್ಯ ನಿಷೇಧ

ಅಂಬಿ ನಿಧನದ ಸುದ್ದಿ ಕೇಳಿ ಅವರ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಅಂಬಿ ಅಂತಿಮ ದರ್ಶನ ಪಡೆಯಲು ರಾಜ್ಯದ ನಾನಾ ಮೂಲೆಗಳಿಂದ ಜನರು ನಗರಕ್ಕೆ ಆಗಮಿಸುತ್ತಿದ್ದಾರೆ. ಸಾಕಷ್ಟು ಅಭಿಮಾನಿಗಳು ಗೊಂದಲಕ್ಕೊಳಗಾಗಿ ಕಂಠೀರವ ಸ್ಟೇಡಿಯಂಗೆ ಹೋಗುವ ಬದಲು ಕಂಠೀರವ ಸ್ಟುಡಿಯೋಕ್ಕೆ ಹೋಗುತ್ತಿದ್ದಾರೆ. ಆದರೆ ನೆನಪಿರಲಿ ಅಂಬಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿರುವುದು ಕಂಠೀರವ ಸ್ಟೇಡಿಯಂನಲ್ಲೇ ಹೊರತು, ಕಂಠೀರವ ಸ್ಟುಡಿಯೋದಲ್ಲಲ್ಲ. 

"

Follow Us:
Download App:
  • android
  • ios