Asianet Suvarna News Asianet Suvarna News

ಅಂಬಿ ನಿಧನ: 2 ದಿನ ಮಧ್ಯ ನಿಷೇಧ

ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗಿದ್ದು, 600ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಕ್ರೀಡಾಂಗಣಕ್ಕೆ ನಿಯೋಜಿಸಲಾಗಿದೆ. 

Ambareesh Death Ban on liqueur sale in Bengaluru
Author
Bengaluru, First Published Nov 25, 2018, 7:25 AM IST

ಬೆಂಗಳೂರು[ನ.25] ರೆಬೆಲ್ ಸ್ಟಾರ್ ಅಂಬರೀಶ್ ನಿಧನವಾದ ಬೆನ್ನಲ್ಲೇ ನಗರದಲ್ಲಿ ಎರಡು ದಿನಗಳ ಕಾಲ ಮಧ್ಯ ನಿಷೇಧ ಮಾಡಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ದೇವರಾಜ್ ಹೇಳಿದ್ದಾರೆ.

'ಅಂಬಿ ಅಂತಿಮ ದರ್ಶನಕ್ಕೆ ಬರೋರಿಗೆ ವಿಶೇಷ ಬಸ್​ ವ್ಯವಸ್ಥೆ, 3ದಿನ ಶೋಕಾಚರಣೆ'

ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗಿದ್ದು, 600ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಕ್ರೀಡಾಂಗಣಕ್ಕೆ ನಿಯೋಜಿಸಲಾಗಿದೆ. ಈಗಾಗಲೇ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಕಲ ಸಿದ್ದತೆ ‌ಮಾಡಲಾಗಿದ್ದು, ಗಣ್ಯರಿಗೆ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.

ರಾಜಕೀಯದಲ್ಲಿ ಸೋಲಿಲ್ಲದ ಸರದಾರ ನಮ್ಮ ಅಂಬಿ

ಇನ್ನು ಕಂಠೀರವ ಸ್ಟೇಡಿಯಂ ಸುತ್ತ ವಾಹನಗಳ ಪಾರ್ಕಿಂಗ್ ನಿಷೇಧ ಮಾಡಲಾಗಿದ್ದು, ಅಂಬಿ ದರ್ಶನಕ್ಕೆ ಬರುವವರು ಫ್ರೀಡಂ ಪಾರ್ಕ್ ಬಳಿ ವಾಹನ ಪಾರ್ಕ್ ಮಾಡಿ ಬರಬೇಕು ಎಂದು ಸಾರ್ವಜನಿಕರಿಗೆ ಡಿಸಿಪಿ ದೇವರಾಜ್ ಮನವಿ ಮಾಡಿಕೊಂಡಿದ್ದಾರೆ.

Follow Us:
Download App:
  • android
  • ios