Asianet Suvarna News Asianet Suvarna News

ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಬಿಲ್ ಗೇಟ್ಸನ್ನು ಹಿಂದಿಕ್ಕಿದ ಅಮೆಜಾನ್ ಸಿಇಓ ಜೆಫ್ ಬೆಜೋಸ್

ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಜೆಫ್ ಬೆಜೋಸ್ ಇಂದು ಹೊರಹೊಮ್ಮಿದ್ದಾರೆ. ಇದುವರೆಗೆ ನಂಬರ್ ಒನ್ ಸ್ಥಾನದಲ್ಲಿದ್ದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್‌ರನ್ನು ಹಿಂದಿಕ್ಕಿವ ಮೂಲಕ ಜೆಫ್ ಬೆಜೋಸ್ ಮೊದಲ ಸ್ಥಾನಕ್ಕೇರಿದ್ದಾರೆ.

Amazon CEO Jeff Bezos briefly overtakes Bill Gates as world richest man Forbes

ಬೆಂಗಳೂರು (ಜು.28): ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಜೆಫ್ ಬೆಜೋಸ್ ಇಂದು ಹೊರಹೊಮ್ಮಿದ್ದಾರೆ. ಇದುವರೆಗೆ ನಂಬರ್ ಒನ್ ಸ್ಥಾನದಲ್ಲಿದ್ದ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್‌ರನ್ನು ಹಿಂದಿಕ್ಕಿವ ಮೂಲಕ ಜೆಫ್ ಬೆಜೋಸ್ ಮೊದಲ ಸ್ಥಾನಕ್ಕೇರಿದ್ದಾರೆ.

ಗುರುವಾರ ಮಾರುಕಟ್ಟೆ ಆರಂಭದಲ್ಲಿ ಅಮೆಜಾನ್ ಷೇರು ಬೆಲೆಗಳು ಶೇ.1.6ರಷ್ಟು ಏರಿಕೆಯಾಗಿದ್ದು ಜೆಫ್ ಬೆಜೋಸ್‌ಗೆ ಹೆಚ್ಚುವರಿಯಾಗಿ 1.4 ಶತಕೋಟಿ ಡಾಲರ್‌ಗಳ ಅದೃಷ್ಟ ವರಿಸಿತು. ಇದರಿಂದ ಅವರ ಸಂಪತ್ತು 90 ಶತಕೋಟಿ ಡಾಲರ್‌ಗಳನ್ನು ಮೀರಿತು ಎಂದು ಬ್ಲೂಮ್‌ಬರ್ಗ್, ಫೋರ್ಬ್ಸ್ ವರದಿ ಮಾಡಿವೆ.

2013 ಮೇ ತಿಂಗಳಿಂದ ಬ್ಲೂಮ್‌ಬರ್ಗ್ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್ ಮೊದಲ ಸ್ಥಾನದಲ್ಲಿರುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಬಿಲ್ ಗೇಟ್ಸ್ ಹಿಂದಿಕ್ಕಿರುವ ಜೆಫ್ ಬೆಜೋಸ್ ಮೊದಲ ಸ್ಥಾನ ಗಳಿಸಿದ್ದಾರೆ.

ಬುಧವಾರ ಷೇರು ಮಾರುಕಟ್ಟೆ ಕೊನೆಯಾಗುವ ವೇಳೆಗೆ ಬಿಲ್ ಗೇಟ್ಸ್ ಸಂಪತ್ತು 90 ಶತಕೋಟಿ ಡಾಲರ್‌ನಷ್ಟಿತ್ತು. ಅವರಿಗೆ ಹತ್ತಿರವಾಗಿ 89 ಶತಕೋಟಿ ಡಾಲರ್ ವರೆಗೂ ಬೆಜೋಸ್ ಹೋಗಿದ್ದರು. ಆದರೆ ಗುರುವಾರದ ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಅಮೆಜಾನ್ ಷೇರುಗಳು ರಾಕೆಟ್ ವೇಗದಲ್ಲಿ ಮುನ್ನುಗ್ಗಿದವು. ಬಿಲ್ ಗೇಟ್ಸ್ ಸಂಪತ್ತನ್ನು ಮೀರಿ ಬೆಜೋಸ್ ಸಂಪತ್ತು 90 ಶತಕೋಟಿ ಡಾಲರ್‌ ಸೂಚ್ಯಂಕವನ್ನು ತಲುಪಿತು.

ಅಮೆಜಾನ್.ಕಾಮ್‌ನಲ್ಲಿ ಬೆಜೋಸ್‌ಗೆ 80 ದಶಲಕ್ಷ ಷೇರ್‌ಗಳಿವೆ. ಇತ್ತೀಚೆಗಷ್ಟೇ ತಮ್ಮ ವಿಡಿಯೋ ಸ್ಟ್ರೀಮಿಂಗ್ ವೇದಿಕೆ ಅಮೆಜಾನ್ ಪ್ರೈಮ್ ಆರಂಭಿಸಿದ್ದರು. ಕಳೆದ 30 ವರ್ಷಗಳಿಂದ ಬೆಜೋಸ್ ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಆರನೆಯವರಾಗಿ ಸ್ಥಾನಪಡೆದಿದ್ದರು.

 

Follow Us:
Download App:
  • android
  • ios