ಕಣಿವೆ ನಾಡು ಜಮ್ಮು-ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದಿದ್ದ ಉಗ್ರರ ಜಾಡು ಪತ್ತೆಯಾಗಿದೆ. ಅಮರನಾಥನ ದರ್ಶನಕ್ಕೆ ತೆರಳುತ್ತಿದ್ದ ಯಾತ್ರಿಕರ ಮೇಲೆ ಪೈಶಾಚಿಕ ಕೃತ್ಯ ನಡೆಸಿದ್ದ ಉಗ್ರರು, ಲಷ್ಕರ್-ಇ-ತೊಯ್ಬಾ ಸಂಘಟನೆಯವರು ಅಂತ ತಿಳಿದುಬಂದಿದೆ. ದುರಂತ ಅಂದ್ರೆ ಬೇಹುಗಾರಿಕೆ ಮಾಹಿತಿಯನ್ನ ಜಮ್ಮು ಸರ್ಕಾರ ನಿರ್ಲಕ್ಷಿಸಿದ ಪರಿಣಾಮ 7 ಯಾತ್ರಿಗಳ ಬಲಿಯಾಗಿತ್ತು.

ಅಹಮದಾಬಾದ್(ಜು.12): ಕಣಿವೆ ನಾಡು ಜಮ್ಮು-ಕಾಶ್ಮೀರದಲ್ಲಿ ಅಟ್ಟಹಾಸ ಮೆರೆದಿದ್ದ ಉಗ್ರರ ಜಾಡು ಪತ್ತೆಯಾಗಿದೆ. ಅಮರನಾಥನ ದರ್ಶನಕ್ಕೆ ತೆರಳುತ್ತಿದ್ದ ಯಾತ್ರಿಕರ ಮೇಲೆ ಪೈಶಾಚಿಕ ಕೃತ್ಯ ನಡೆಸಿದ್ದ ಉಗ್ರರು, ಲಷ್ಕರ್-ಇ-ತೊಯ್ಬಾ ಸಂಘಟನೆಯವರು ಅಂತ ತಿಳಿದುಬಂದಿದೆ. ದುರಂತ ಅಂದ್ರೆ ಬೇಹುಗಾರಿಕೆ ಮಾಹಿತಿಯನ್ನ ಜಮ್ಮು ಸರ್ಕಾರ ನಿರ್ಲಕ್ಷಿಸಿದ ಪರಿಣಾಮ 7 ಯಾತ್ರಿಗಳ ಬಲಿಯಾಗಿತ್ತು.

LET ಅಟ್ಟಹಾಸ: ಯಾತ್ರಾರ್ಥಿಗಳಿಗೆ ಗುಂಡಿಟ್ಟಿದ್ದು ಲಷ್ಕರ್-ಇ-ತೊಯ್ಬಾ

ಅಮರನಾಥ ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಿದ್ದು, ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಭಯೋತ್ಪಾದಕರು ಅಂತ ಜಮ್ಮು-ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. LETಯ 4-5 ಉಗ್ರರ ತಂಡ ಬೈಕಿನಲ್ಲಿ ಬಂದು ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಿದ್ದು, ಇಸ್ಮಾಯಿಲ್ ಅನ್ನೋ ಓರ್ವ ಉಗ್ರನ ಗುರುತು ಪತ್ತೆ ಕೂಡ ಆಗಿದೆ.

ಮಾಹಿತಿ ಇದ್ದರೂ ಎಚ್ಚೆತ್ತುಕೊಳ್ಳದ ಖಾಕಿ: ಗುಜರಾತ್ ಮೇಲೆ ಲಷ್ಕರ್-ಇ-ತೊಯ್ಬಾ ಕೆಂಗಣ್ಣು..!

ಲಷ್ಕರ್-ಇ-ತೊಯ್ಬಾ ದಾಳಿಗೆ ಸಜ್ಜಾಗಿದೆ ಎನ್ನುವ ಮಾಹಿತಿಯನ್ನ ಗುಪ್ತಚರ ಇಲಾಖೆ ಮೊದಲೇ ನೀಡಿತ್ತು. ಆದ್ರೆ ಜಮ್ಮು ಕಾಶ್ಮೀರ ಪೊಲೀಸ್ ಇಲಾಖೆ ನಿರ್ಲಕ್ಷಿಸಿತ್ತು ಅನ್ನೋ ಮಾಹಿತಿ ತಿಳಿದುಬಂದಿದೆ. ಅಷ್ಟೇ ಅಲ್ಲಾ LET ಉಗ್ರರು ಗುಜರಾತ್ ಮತ್ತು ಉತ್ತರ ಪ್ರದೇಶದ ಮೇಲೆ ಕಣ್ಣಿಟ್ಟಿದ್ದು, ಗುಜರಾತ್ ನೋಂದಣಿಯ ಬಸ್ ನೋಡಿಯೇ ಮನ ಬಂದಂತೆ ದಾಳಿ ನಡೆಸಿದ್ದಾರೆ ಅಂತ ತಿಳಿದುಬಂದಿದೆ.

ಇನ್ನೂ ದಾಳಿಗೆ ವಿಶ್ವ ಹಿಂದೂ ಪರಿಷತ್, ಜಮ್ಮುಮತ್ತು ಕಾಶ್ಮೀರ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಬಂದ್​​ ಆಚರಿಸಲು ನಿರ್ಧರಿಸಿವೆ. ಪರಿಸ್ಥಿತಿಯನ್ನು ಅವಲೋಕಿಸಲು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಉನ್ನತ ಮಟ್ಟದ ತುರ್ತು ಸಭೆ ಕರೆದಿದ್ದಾರೆ. ಆದ್ರೆ, ದುಷ್ಕೃತ್ಯ ಬಿಡದ LET ಪಾಪಿಗಳು ತಾನು ಮತ್ತೆ ದಾಳಿ ನಡೆಸೇ ತೀರುತ್ತೇವೆ ಅಂತ ಮತ್ತೊಮ್ಮೆ ಕೇಕೆ ಹಾಕಿದ್ದು ಭಾರತೀಯರನ್ನ ಕೆರಳಿಸಿದೆ.