ಲೈಂಗಿಕ ಹಗರಣಕ್ಕೆ ಈ ಬಾರಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಬಲಿ?

First Published 1, May 2018, 8:41 AM IST
Allegation on Nobel Prize
Highlights

ನವದೆಹಲಿ: ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವ ಜಾಗತಿಕ ಮಟ್ಟದ ಪರಮೋಚ್ಚ ಪ್ರಶಸ್ತಿಯಾದ ಸಾಹಿತ್ಯದ ನೊಬೆಲ್ ಮೇಲೆ ಈ ಬಾರಿ ಲೈಂಗಿಕ ಹಗರಣದ ಕಾರ್ಮೋಡ ಕವಿದಿದೆ. ಹೀಗಾಗಿ, 2 ನೇ ವಿಶ್ವ ಮಹಾಯುದ್ಧದ ನಂತರ ಮೊದಲ ಬಾರಿ ಈ ವರ್ಷ ಸಾಹಿತ್ಯದ ನೊಬೆಲ್ ನೀಡದೆ ಇರುವ ಸಾಧ್ಯತೆ ದಟ್ಟವಾಗಿದೆ.

ನವದೆಹಲಿ (ಮೇ. 01): ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವ ಜಾಗತಿಕ ಮಟ್ಟದ ಪರಮೋಚ್ಚ ಪ್ರಶಸ್ತಿಯಾದ ಸಾಹಿತ್ಯದ ನೊಬೆಲ್ ಮೇಲೆ ಈ ಬಾರಿ ಲೈಂಗಿಕ ಹಗರಣದ ಕಾರ್ಮೋಡ ಕವಿದಿದೆ. ಹೀಗಾಗಿ, 2 ನೇ ವಿಶ್ವ ಮಹಾಯುದ್ಧದ ನಂತರ ಮೊದಲ ಬಾರಿ ಈ ವರ್ಷ ಸಾಹಿತ್ಯದ ನೊಬೆಲ್ ನೀಡದೆ ಇರುವ ಸಾಧ್ಯತೆ ದಟ್ಟವಾಗಿದೆ.

ಸಾಹಿತ್ಯದ ನೊಬೆಲ್ ಪ್ರಶಸ್ತಿಗೆ ಲೇಖಕರನ್ನು ಆಯ್ಕೆ ಮಾಡುವ ಸ್ವೀಡಿಶ್ ಅಕಾಡೆಮಿಯ 18 ಸದಸ್ಯರ ಪೈಕಿ ಅಕಾಡೆಮಿಯ ಅಧ್ಯಕ್ಷರೂ ಸೇರಿದಂತೆ ಏಳು ಮಂದಿ ಇತ್ತೀಚೆಗೆ ರಾಜೀನಾಮೆ ನೀಡಿದ್ದಾರೆ. ಕಾರಣ  ಅಕಾಡೆಮಿಯ ಮಾಜಿ ಸದಸ್ಯೆಯೊಬ್ಬರ ಪತಿಯ ಮೇಲೆ 18 ಮಹಿಳೆಯರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸದರಿ ಸದಸ್ಯೆಯನ್ನು ಅಕಾಡೆಮಿಯಿಂದ ಕಿತ್ತುಹಾಕಲು ಸಭೆಯಲ್ಲಿ ಮತದಾನ ನಡೆದಿತ್ತು. ಆಗ, ಆಕೆಯನ್ನು ವಜಾಗೊಳಿಸದೆ ಇರಲು ಬಹುಮತ ಬಂದಿತು. ಅದನ್ನು ವಿರೋಧಿಸಿ ಅಧ್ಯಕ್ಷರು ಹಾಗೂ ಆರು ಸದಸ್ಯರು ರಾಜೀನಾಮೆ  ನೀಡಿದ್ದಾರೆ. ಹೀಗಾಗಿ ಈ ವರ್ಷ ಅಕ್ಟೋಬರ್‌ನಲ್ಲಿ ಪ್ರಕಟವಾಗಬೇಕಿದ್ದ ಸಾಹಿತ್ಯದ ನೊಬೆಲ್ ಪ್ರಶಸ್ತಿ ಪ್ರಕಟವಾಗುವುದೇ ಇಲ್ಲವೇ ಎಂಬ ಗೊಂದಲ ಮೂಡಿದೆ. 

loader