ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ಚೆಂಡಾಡಿದ ವಾಯುಸೇನೆ| ಭಾರತದ ಪ್ರತ್ಯುತ್ತರಕ್ಕೆ ಪಾಕಿಸ್ತಾನ ಕಂಗಾಲು| ವಾಯುಸೇನೆಯ ಕಾರ್ಯಾಚರಣೆಗೆ ಭೂಸೇನೆ ಅಭಿನಂದನೆ| ಭಾರತೀಯ ಸೇನೆಯ ಶೌರ್ಯದ ಕುರಿತು ಎಡಿಜಿಪಿ ಟ್ವೀಟ್| ಸೈನಿಕನ ಮೌನ ಆತನ ಹೇಡಿತನವಲ್ಲ ಎಂದ ಭೂಸೇನೆ|  

ಶೌರ್ಯದಲ್ಲಿದೆ ವಿನಯದ ದೀಪ: ಓದಲೇಬೇಕು ಸೇನೆಯ ಟ್ವೀಟ್

ನವದೆಹಲಿ(ಫೆ.26): ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ 300 ಉಗ್ರರ ಚೆಂಡಾಡಿದ ಭಾರತೀಯ ವಾಯುಸೇನೆಗೆ, ಭಾರತೀಯ ಭೂಸೇನೆ ಅಭಿನಂದನೆ ಸಲ್ಲಿಸಿದೆ.

"

ಈ ಕುರಿತು ಭಾರತೀಯ ಭೂಸೇನೆಯ ಎಡಿಜಿ-ಪಿಐ ಟ್ವೀಟ್ ಮಾಡಿದ್ದು, ನಮ್ಮ ಮೌನವನ್ನು ನಮ್ಮ ಹೇಡಿತನ ಎಂದು ಬಗೆದರೆ ಇದೇ ಗತಿ ಎಂದು ಹೇಳಿದೆ.

Scroll to load tweet…

ಸೈನಿಕನ ಮೌನ ಆತನ ಹೇಡಿತನವಲ್ಲ, ಆತನ ಮೌನವನ್ನು ಹೇಡಿತನ ಎಂದು ಬಗೆದ ದುಷ್ಟ ಕೌರವರಿಗೆ ಇಂದು ತಕ್ಕ ಪಾಠ ಕಲಿಸಲಾಗಿದ್ದು, ಭಾರತೀಯ ಸೇನೆಯ ಶೌರ್ಯದಲ್ಲಿ ವಿನಯ ಮನೆ ಮಾಡಿದೆ ಎಂದು ಭಾವನಾತ್ಮಕವಾಗಿ ಟ್ವೀಟ್ ಮಾಡಿದೆ.