ನವದೆಹಲಿ[ಫೆ.26]: ಭಾರತೀಯ ವಾಯುಸೇನೆಯು ಪುಲ್ವಾಮಾ ಉಗ್ರ ದಾಳಿಗೆ ಸೇಡು ತೀರಿಸಿದೆ. ಪುಲ್ವಾಮಾ ದಾಳಿ ನಡೆದ ಕೇವಲ ಎರಡೇ ವಾರದೊಳಗೆ ಭಾರತವು ಉಗ್ರ ಸಂಘಟನೆ ಜೈಷ್-ಎ-ಮೊಹಮ್ಮದ್ ಕ್ಯಾಂಪ್ ಮೇಲೆ ಏರ್ ಸ್ಟ್ರೈಕ್ ಮಾಡಿ ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಪಾಕ್ ಮಾಧ್ಯಮಗಳು ಈ ದಾಳಿಯಲ್ಲಿ ಸುಮಾರು 200 ಉಗ್ರರು ಹತರಾಗಿದ್ದಾರೆಂದು ವರದಿ ಮಾಡಿವೆ. ದಾಳಿಯ ಬೆನ್ನಲ್ಲೇ ರಾಜಕೀಯ ಮುಖಂಡರು ಪ್ರತಿಕ್ರಿಯಿಸಿದ್ದು, ಮೋದಿ ಸರ್ಕಾರದ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಈ ದಾಳಿಯನ್ನು ಭಿನ್ನವಾಗಿ ವರ್ಣಿಸಿದ್ದಾರೆ.

ನಾಲ್ಕು ದಶಕದ ನಂತರ LOC ದಾಟಿದ ಭಾರತದ ಲೋಹದ ಹಕ್ಕಿಗಳು!

ಕೇಂದ್ರದ ರಾಜ್ಯ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಟ್ವೀಟ್ ಒಂದನ್ನು ಮಾಡುತ್ತಾ 'ಇದು ಮೋದಿಯ ಹಿಂದೂಸ್ಥಾನ, ಮನೆಯೊಳಗೆ ನುಗ್ಗುವುದೂ ಗೊತ್ತು, ಹೊಡೆದುರುಳಿಸುವುದೂ ಗೊತ್ತು. ಒಂದೊಂದು ರಕ್ತದ ಹನಿಗೂ ಪ್ರತೀಕಾರ ಪಡೆಯುತ್ತೇವೆ. ಈ ದೇಶವನ್ನು ತಲೆ ತಗ್ಗಿಸುವಂತೆ ಮಾಡುವುದಿಲ್ಲ' ಎಂದಿದ್ದಾರೆ. ಲಭ್ಯವಾದ ಮಾಹಿತಿ ಅನ್ವಯ ಭಾರತೀಯ ವಾಯು ಸೇನೆಯ 12 ಮಿರಾಜ್ 2000 ಫೈಟರ್ ಜೆಟ್ ಗಳು ಖೈಬರ್ ಪ್ರಾಂತ್ಯದಲ್ಲಿರುವ ಬಾಲಾಕೋಟ್ ನಲ್ಲಿರುವ ಹಲವಾರು ಉಗ್ರ ನೆಲೆಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿದೆ.

ಉಗ್ರರ 350ಕೆಜಿ ಬಾಂಬ್ ಗೆ, ಭಾರತದ 1000 ಕೆಜಿ ಬಾಂಬ್‌ ನಿಂದ ಉತ್ತರ!

ಪುಲ್ವಾಮಾ ದಾಳಿ ನಡೆದ ಕೇವಲ 2 ವಾರಗಳೊಳಗೆ ಈ ದಾಳಿ ನಡೆದಿದೆ, ಈ ಮೂಲಕ ಭಾರತವು ಉಗ್ರರಿಗೆ ತಕ್ಕ ಪ್ರತ್ಯುತ್ತರ ನೀಡಿದೆ.