ಬೆಂಗಳೂರು (ಸೆ.21): ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಕರೆದ ಸರ್ವಪಕ್ಷ ಸಭೆ ಮುಕ್ತಾಯಗೊಂಡಿದೆ.

ಸಭೆಯಲ್ಲಿ  ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಭಾಗಿಯಾಗಿದ್ದರು. 20 ವರ್ಷಗಳ ಬಳಿಕ  ದೇವೇಗೌಡರು ಸರ್ವ ಪಕ್ಷ ಸಭೆಯಲ್ಲಿ ಭಾಗಿಯಾಗಿ ಸಲಹೆ ನೀಡಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ರೈತ ನಾಯಕ ಪುಟ್ಡಣಯ್ಯ ಕೂಡ ಭಾಗವಹಿಸಿ  ಸಾಕಷ್ಟು ಸಲಹೆ ನೀಡಿದ್ದಾರೆ. ಬಿಜೆಪಿ ನಾಯಕರು ಸರ್ವಪಕ್ಷ ಸಭೆಗೆ ಬಂದಿಲ್ಲ‌. ಯಾಕೆ ಬಿಜೆಪಿ ನಾಯಕರು‌ ಬಂದಿಲ್ಲ ಗೊತ್ತಿಲ್ಲ. ನಾವು  ಆಹ್ವಾನ ನೀಡಿದ್ದೆವು ಎಂದು ಸಿಎಂ ಹೇಳಿದ್ದಾರೆ. 

ಈ ಸಭೆಯಲ್ಲಿ ಚರ್ಚಿತವಾದ ವಿಚಾರವನ್ನು  ತುರ್ತು ಸಚಿವ ಸಂಪುಟ ಸಭೆಯ ಮುಂದಿಡುತ್ತೇವೆ.  ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಸರ್ವಪಕ್ಷ ಸಭೆ ಬಳಿಕ  ಸಿಎಂ ಸಿದ್ದರಾಮಯ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.