ಮುಂಬರುವ 2 ವರ್ಷಗಳಲ್ಲಿ ಎಲ್ಲಾ ಬಸ್ ಗಳು ಎಲೆಕ್ಟ್ರಿಕ್ ಆಗಿ ಪರಿವರ್ತನೆ | ಇಂಥ ಬಸ್‌ಗಳನ್ನು ಬಯೋ ಸಿಎನ್‌ಜಿ, ಎಥನಾಲ್, ಮೆಥನಾಲ್ ಮೂಲಕ ಓಡಿಸಲು ಕ್ರಮ- ನಿತಿನ್ ಗಡ್ಕರಿ  

ನವದೆಹಲಿ (ಸೆ. 24): ಮುಂದಿನ 2 ವರ್ಷಗಳಲ್ಲಿ ದೇಶದಲ್ಲಿನ ಎಲ್ಲಾ ಬಸ್‌ಗಳನ್ನು ಎಲೆಕ್ಟ್ರಿಕ್ ಮಾದರಿಗೆ ಪರಿವರ್ತಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ಎಲೆಕ್ಟ್ರಿಕ್ ವಾಹನಗಳ ಬಳಕೆ ಕಡ್ಡಾಯ ಮಾಡದ ಹೊರತಾಗಿಯೂ, ಮುಂದಿನ ೨ ವರ್ಷಗಳಲ್ಲಿ ಎಲ್ಲಾ ಬಸ್‌ಗಳನ್ನು ಎಲೆಕ್ಟ್ರಿಕ್ ಮಾದರಿಗೆ ಪರಿವರ್ತಿಸಲಾಗುವುದು. ಇಂಥ ಬಸ್‌ಗಳನ್ನು ಬಯೋ ಸಿಎನ್‌ಜಿ, ಎಥನಾಲ್, ಮೆಥನಾಲ್ ಮೂಲಕ ಓಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಪರ್ಯಾಯ ಇಂಧನ ಆಧರಿತ ವಾಹನಗಳ ಬಳಕೆಗೆ ಸರ್ಕಾರ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.