ಅಲ್ಲದೆ, ತಮ್ಮ ಕಾಶ್ಮೀರ ಸಹೋದರರ ಪ್ರಾಣವನ್ನು ತಮ್ಮ ಅಂಗೈಯಲ್ಲಿಟ್ಟುಕೊಂಡಿರುವ ಭಾರತೀಯ ಸೇನಾ ಪಡೆ ಅಧಿಕಾರಿಗಳು, ಗುಪ್ತಚರ ಸಂಸ್ಥೆಗಳು ಮತ್ತು ಪೊಲೀಸರ ವಿರುದ್ಧವೂ ದಾಳಿ ಎಸಗುವುದಾಗಿ ಉಗ್ರರು ಪಣ ತೊಟ್ಟಿದ್ದಾರೆ.

ನವದೆಹಲಿ: ಮುಸ್ಲಿಮರ ಹತ್ಯೆ, ಮತಾಂತರಕ್ಕೆ ಬಲವಂತ, ಅವರ ಆಸ್ತಿಪಾಸ್ತಿಗೆ ಹಾನಿ ಮತ್ತು ಮಸೀದಿಗಳ ಧ್ವಂಸ ಪ್ರಕರಣಗಳಲ್ಲಿ ಭಾಗಿಯಾಗುವ ಹಿಂದೂ ಸಂಘಟನೆಗಳ ಮೇಲೆ ದಾಳಿ ಮಾಡುವುದಾಗಿ ಅಲ್‌ಖೈದಾ ಭಯೋತ್ಪಾದಕ ಸಂಘಟನೆ ಎಚ್ಚರಿಕೆ ನೀಡಿದೆ. ಅಲ್ಲದೆ, ತಮ್ಮ ಕಾಶ್ಮೀರ ಸಹೋದರರ ಪ್ರಾಣವನ್ನು ತಮ್ಮ ಅಂಗೈಯಲ್ಲಿಟ್ಟುಕೊಂಡಿರುವ ಭಾರತೀಯ ಸೇನಾ ಪಡೆ ಅಧಿಕಾರಿಗಳು, ಗುಪ್ತಚರ ಸಂಸ್ಥೆಗಳು ಮತ್ತು ಪೊಲೀಸರ ವಿರುದ್ಧವೂ ದಾಳಿ ಎಸಗುವುದಾಗಿ ಉಗ್ರರು ಪಣ ತೊಟ್ಟಿದ್ದಾರೆ. ಈ ಎಲ್ಲ ಅಂಶಗಳು ‘ಮುಜಾಹಿದ್ದೀನ್ ಸಂಘಟನೆಯ ನೀತಿ ಸಂಹಿತೆಗಳು’ ಎಂಬ ಇತ್ತೀಚಿನ ಹೇಳಿಕೆಯೊಂದರಲ್ಲಿ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred