ಹುತಾತ್ಮ ಯೋಧರ ಬ್ಯಾಂಕ್ ಖಾತೆ ಸಂಖ್ಯೆಯನ್ನು ಒದಗಿಸುವಂತೆ ಗೃಹ ಸಚಿವಾಲಯಕ್ಕೆ ನಿನ್ನೆ ಮಧ್ಯಾಹ್ನ ಅಕ್ಷಯ್ ಕುಮಾರ್ ಮನವಿ ಮಾಡಿಕೊಂಡಿದ್ದರು. ಮನವಿಗೆ ಇಲಾಖೆಯು ಸಕಾರಾತ್ಮಕವಾಗಿ ಸ್ಪಂದಿಸಿದ ಬೆನ್ನಲ್ಲೇ ಅಕ್ಷಯ್ ಯೋಧರ ಖಾತೆಗಳಿಗೆ ಹಣವನ್ನು ವರ್ಗಾಯಿಸಿದ್ದಾರೆ.
ನವದೆಹಲಿ (ಮಾ.17): ಛತ್ತೀಸ್’ಗಡದ ಸುಕ್ಮಾದಲ್ಲಿ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ರೂ.1.08 ಕೋಟಿ ಹಣಕಾಸು ನೆರವನ್ನೊದಗಿಸಿ ತಾನು ನೈಜ ಜೀವನದಲ್ಲೂ ಹೀರೋ ಎಂದು ತೋರಿಸಿಕೊಟ್ಟಿದ್ದಾರೆ.
ಮಾ.11 ರಂದು ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರ ದಾಳಿಗೆ 12 ಮಂದಿ ಸಿಆರ್’ಪಿಎಫ್’ ಯೋಧರು ಹುತಾತ್ಮರಾಗಿದ್ದರು. ಅಕ್ಷಯ್ ಕುಮಾರ್ ಹುತಾತ್ಮ ಯೋಧರ ಕುಟುಂಬಗಳಿಗೆ ತಲಾ ರೂ.9 ಲಕ್ಷಗಳನ್ನು ನೀಡಿದ್ದಾರೆ.
ಹುತಾ ಯೋಧರ ಬ್ಯಾಂಕ್ ಖಾತೆ ಸಂಖ್ಯೆಯನ್ನು ಒದಗಿಸುವಂತೆ ಗೃಹ ಸಚಿವಾಲಯಕ್ಕೆ ನಿನ್ನೆ ಮಧ್ಯಾಹ್ನ ಅಕ್ಷಯ್ ಕುಮಾರ್ ಮನವಿ ಮಾಡಿಕೊಂಡಿದ್ದರು. ಮನವಿಗೆ ಇಲಾಖೆಯು ಸಕಾರಾತ್ಮಕವಾಗಿ ಸ್ಪಂದಿಸಿದ ಬೆನ್ನಲ್ಲೇ ಅಕ್ಷಯ್ ಯೋಧರ ಖಾತೆಗಳಿಗೆ ಹಣವನ್ನು ವರ್ಗಾಯಿಸಿದ್ದಾರೆ.
ಅಕ್ಷಯ್ ಕುಮಾರ್ ಅವರ ಕ್ರಮವು ದೇಶಪ್ರೇಮ ಹಾಗೂ ಸಿಆರ್’ಪಿಎಫ್’ನೊಂದಿಗಿರುವ ಗೌರವವನ್ನು ತೋರಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಕ್ಷಯ್ ಕುಮಾರ್ ಉದಾರತೆಯನ್ನು ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ ಅವರು ಕೂಡಾ ಶ್ಲಾಘಿಸಿದ್ದಾರೆ.
