ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ನೌಕರಿ ಇಲ್ಲ ಎಂದ ಸರ್ಕಾರ!

ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ನೌಕರಿ ಇಲ್ಲ ಎಂದ ಸರ್ಕಾರ| ಮುಖ್ಯಮಂತ್ರಿ ನೇತೃತ್ವದ ಸಚಿವ ಸಂಪುಟ ಸಭೆಯಕಲ್ಲಿ ಮಹತ್ವದ ನಿರ್ಧಾರ| ಜನಸಂಖ್ಯೆ ನಿಯಂತ್ರಣಕ್ಕೆ ಮಹತ್ವದ ನಿರ್ಣಯ ಕೈಗೊಂಡ ಅಸ್ಸಾಂ ಸರ್ಕಾರ| 2021ರಲ್ಲಿ ಹೊಸ ನೀತಿ ಜಾರಿಗೆ ಮುಂದಾದ ಸಿಎಂ ಸರ್ಬಂದಾ ಸೋನೋವಾಲ್|  ಅಸ್ಸಾಂ ಜನಸಂಖ್ಯೆ ಮತ್ತು ಮಹಿಳಾ ಸಬಲೀಕರಣ ನೀತಿ| ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ನೌಕರಿಗೆ ಅನರ್ಹ|  

Assam Announces No Govt Jobs For Those With More Than Two Kids

ಗುವಹಾಟಿ(ಅ.22): ಜನಸಂಖ್ಯೆ ನಿಯಂತ್ರಣ ಸರ್ಕಾರಗಳ ಪ್ರಾಥಮಿಕ ಆದ್ಯತೆಯಾಗಿದ್ದು, ವಿವಿಧ ಕುಟುಂಬ ಕಲ್ಯಾಣ ಯೋಜನೆಗಳ ಮೂಲಕ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗಿವೆ.

ಅದರಂತೆ ಇತ್ತೀಚಿಗಷ್ಟೇ NRC ಪ್ರಕ್ರಿಯೆ ಮುಗಿಸಿ ನಿರಾಳವಾಗಿರುವ ಅಸ್ಸಾಂ, ಜನಸಂಖ್ಯೆ ನಿಯಂತ್ರಣಕ್ಕೆ ಮಹತ್ವದ ನಿರ್ಧಾರ ಘೋಷಿಸಿದೆ. 2021ರಿಂದ ಜಾರಿಗೆ ಬರುವಂತೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದರೆ  ಸರ್ಕಾರಿ ಉದ್ಯೋಗಕ್ಕೆ ಅನರ್ಹ ಎಂದು ಅಸ್ಸಾಂ ಸರ್ಕಾರ ಘೋಷಣೆ ಮಾಡಿದೆ. 

ಮುಖ್ಯಮಂತ್ರಿ  ಸರ್ಬಂದಾ ಸೋನೋವಾಲ್ ನೇತೃತ್ವದ  ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು 2021 ರಿಂದ ಈ ನೀತಿ ಅನುಷ್ಠಾನಗೊಳ್ಳಲಿದೆ. 

2017 ರಲ್ಲಿ ಅಸ್ಸಾಂ ವಿಧಾನಸಭೆಯಲ್ಲಿ  “ಅಸ್ಸಾಂ ಜನಸಂಖ್ಯೆ ಮತ್ತು ಮಹಿಳಾ ಸಬಲೀಕರಣ ನೀತಿ” ಅಂಗಿಕಾರವಾಗಿತ್ತು. ಇದರ ಅನ್ವಯ ಎರಡು ಅಥವಾ ಒಂದು ಮಕ್ಕಳನ್ನು ಹೊಂದಿದ್ದರವರು ಮಾತ್ರ ಸರ್ಕಾರಿ ಉದ್ಯೋಗ ಪಡೆಯಲು ಅರ್ಹರಾಗಿದ್ದರು. 

ಈ ನೀತಿ ಪ್ರಸ್ತುತ ಸರ್ಕಾರಿ ಉದ್ಯೋಗದಲ್ಲಿರುವವರಿಗೂ ಅನ್ವವಾಗಲಿದ್ದು 2021 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Latest Videos
Follow Us:
Download App:
  • android
  • ios