'ಪ್ರಯಾಣಿಕರ ಜತೆ ಸರಿಯಾಗಿ ನಡೆದುಕೊಳ್ಳದ ವಿಮಾನಯಾನ ಸಿಬ್ಬಂದಿ ಮೇಲೆಯೂ ಇಂಥದ್ದೇ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು'

ಮುಂಬೈ: ಅನುಚಿತ ವರ್ತನೆ ತೋರುವ ವಿಮಾನ ಪ್ರಯಾಣಿಕರ ಮೇಲೆ 3 ತಿಂಗಳ ನಿಷೇಧ ಹೇರುವ ‘ನೋ ಫ್ಲೈ' ನಿಯಮ ಜಾರಿಗೊಳಿಸಲು ಕೇಂದ್ರ ಮುಂದಾದ ಬೆನ್ನಲ್ಲೇ, ಪ್ರಯಾಣಿಕರ ಜತೆ ಸರಿಯಾಗಿ ನಡೆದುಕೊಳ್ಳದ ವಿಮಾನಯಾನ ಸಿಬ್ಬಂದಿ ಮೇಲೆಯೂ ಇಂಥದ್ದೇ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಏರ್‌ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಹಲ್ಲೆ ಮಾಡಿ ದೇಶೀಯ ವಿಮಾನಗಳಿಂದ ನಿಷೇಧಕ್ಕೊಳಗಾಗಿದ್ದ ಶಿವಸೇನಾ ಸಂಸದ ರವೀಂದ್ರ ಗಾಯಕ್‌ವಾಡ್‌ ಆಗ್ರಹಿಸಿದ್ದಾರೆ. ಕೇಂದ್ರದ ಹೊಸ ಕರಡು ಮಾರ್ಗಸೂಚಿ ಕುರಿತು ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.