ನವದೆಹಲಿ: ಕೇಂದ್ರದಲ್ಲಿ ಅಧಿಕಾರಾರೂಢ ಬಿಜೆಪಿ ಸರ್ಕಾರವು ಭಾರತದ ಪ್ರಜಾಪ್ರಭುತ್ವದೊಂದಿಗೆ ‘ಹೊಂದಾಣಿಕೆ’ ಮಾಡಿಕೊಳ್ಳುತ್ತಿದೆ. ಈ ‘ಅಪಾಯಕಾರಿ ಆಡಳಿತ’ದಿಂದ ಜನರನ್ನು ರಕ್ಷಿಸಬೇಕಿದೆ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆ ಕೊಟ್ಟಿದ್ದಾರೆ.

ಭಾನುವಾರ ಇಲ್ಲಿ ನಡೆದ ಸಿಡಬ್ಲ್ಯುಸಿ ಸಭೆಯಲ್ಲಿ ಮಾತನಾಡಿದ ಸೋನಿಯಾ, ನರೇಂದ್ರ ಮೋದಿ ಸರ್ಕಾರದ  ವಿರುದ್ಧ ಹರಿಹಾಯ್ದರು. ಭಾರತದ ವಂಚಿತರು ಹಾಗೂ ಬಡವರ ಮೇಲೆ ಭಯದ ಆಳ್ವಿಕೆಯನ್ನು ಹೇರಲಾಗುತ್ತಿದೆ. 

ಮೋದಿ ಈಗ ಹತಾಶರಾದಂತೆ ಕಂಡುಬರುತ್ತಿದ್ದು, ಅವರ ಸರ್ಕಾರದ ‘ರಿವರ್ಸ್ ಕೌಂಟ್‌ಡೌನ್’ನ ಪ್ರತೀಕಾರವಾಗಿದೆ ಎಂದರು. ‘ನಾವು ಮೈತ್ರಿಗೆ ಬದ್ಧರಾಗಿದ್ದೇವೆ. ನಾವೆಲ್ಲ ಈ  ವಿಷಯದಲ್ಲಿ ರಾಹುಲ್ ಗಾಂಧಿ ಅವರ ಜತೆಗಿದ್ದೇವೆ’ ಎಂದೂ ಸೋನಿಯಾ ಹೇಳಿದರು.