ಪೊಲೀಸರ ಆದೇಶದ ಪ್ರಕಾರ ಇಂದು ಬೆಳಗ್ಗೆಯಿಂದ 2018 ಜನವರಿ 7ರವರೆಗೆ ಭಿಕ್ಷುಕರು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವಂತಿಲ್ಲ.

ಹೈದರಾಬಾದ್(ನ.09): ಇದೇ 28ರಿಂದ 2018ರ ಜನವರಿ 7ರವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುವವರನ್ನು ತೆರವುಗೊಳಿಸಲು ಪೊಲೀಸ್‌ ಕಮಿಷನರ್‌ ಆದೇಶಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

’ಎಂಟನೇ ಜಾಗತಿಕ ಉದ್ಯಮಶೀಲತಾ ಶೃಂಗಸಭೆ–2017‘ ನಡೆಯುವ ಕಾರಣದಿಂದ ಆದೇಶ ಹೊರಬಿದ್ದಿದೆ. ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಮಗಳು ಇವಾಂಕಾ ಟ್ರಂಪ್‌ ಭಾಗವಹಿಸಲಿದ್ದಾರೆ. ನಗರದ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷುಕರ ಹಾವಳಿ ಹೆಚ್ಚಿರುವ ಕಾರಣ ಈ ಕ್ರಮ ಜರುಗುಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ. ಪೊಲೀಸರ ಆದೇಶದ ಪ್ರಕಾರ ಇಂದು ಬೆಳಗ್ಗೆಯಿಂದ 2018 ಜನವರಿ 7ರವರೆಗೆ ಭಿಕ್ಷುಕರು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವಂತಿಲ್ಲ.