ಸುಪಾರಿ ಕೇಸ್'ನಲ್ಲಿ ಬಂಧನವಾಗಿರುವ ರವಿ ಬೆಳಗೆರೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಗ್ನಿ ಶ್ರೀಧರ್, ಬೆಳಗೆರೆ 'ಪಾಪಿಗಳ ಲೋಕದಲ್ಲಿ' ಎಂದು ರೌಡಿಗಳ ಬಗ್ಗೆ ಬರೆಯುತ್ತಿದ್ದ, ಬರಹದ ಮೂಲಕವೇ ರೌಡಿಗಳ ನಡುವೆ ದ್ವೇಷ ಹುಟ್ಟು ಹಾಕ್ತಾಯಿದ್ದ ಎಂದು ಶ್ರೀಧರ್ ಆರೋಪ ಮಾಡಿದ್ದಾರೆ.

ಬೆಂಗಳೂರು(ಡಿ.11): ಸೆಕ್ಸ್ ಹಾಗೂ ಕ್ರೈಂ ಬಗ್ಗೆ ಜನರಿಗಿರುವ ಆಸಕ್ತಿಯನ್ನೇ ಬಂಡವಾಳ ಮಾಡಿಕೊಂಡಿರುವ ರವಿ ಬೆಳಗೆರೆ ಕನ್ನಡದ ಸನ್ನಿ ಲಿಯೋನ್ ಎಂದು ಅಗ್ನಿ ಶ್ರೀಧರ್ ವ್ಯಂಗ್ಯವಾಡಿದ್ದಾರೆ.

ಸುಪಾರಿ ಕೇಸ್'ನಲ್ಲಿ ಬಂಧನವಾಗಿರುವ ರವಿ ಬೆಳಗೆರೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅಗ್ನಿ ಶ್ರೀಧರ್, ಬೆಳಗೆರೆ 'ಪಾಪಿಗಳ ಲೋಕದಲ್ಲಿ' ಎಂದು ರೌಡಿಗಳ ಬಗ್ಗೆ ಬರೆಯುತ್ತಿದ್ದ, ಬರಹದ ಮೂಲಕವೇ ರೌಡಿಗಳ ನಡುವೆ ದ್ವೇಷ ಹುಟ್ಟು ಹಾಕ್ತಾಯಿದ್ದ ಎಂದು ಶ್ರೀಧರ್ ಆರೋಪ ಮಾಡಿದ್ದಾರೆ.

ಲೇಔಟ್ ಮಂಜನ ಹತ್ಯೆಗೆ, ಜೇಡರಹಳ್ಳಿ ಕೃಷ್ಣಪ್ಪನ ದ್ವೇಷಕ್ಕೆ ಬೆಳಗೆರೆ ಕಾರಣ ಎಂಬ ಗಂಭೀರ ಆರೋಪವನ್ನು ಅಗ್ನಿ ಶ್ರೀಧರ್ ಮಾಡಿದ್ದಾರೆ.

ಹಾಯ್ ಬೆಂಗಳೂರು ಕ್ರೈಂ ವರದಿಗಾರರಾಗಿದ್ದ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದ ಆರೋಪದಡಿ ರವಿ ಬೆಳಗೆರೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.