ಎಚ್.ಡಿ.ರೇವಣ್ಣ ಇದೀಗ ಮತ್ತೊಮ್ಮೆ ವಾಸ್ತು ಪ್ರಕಾರ ನಡೆದುಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.  ಕಾರಿನಿಂದ ರಾಹುಕಾಲ ಎಂದು ಇಳಿಯದೇ ಅಲ್ಪ ಸಮಯ ಬಿಟ್ಟು ಇಳಿದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 

ಬೆಳಗಾವಿ : ಬೆಳಗಾವಿ ನಗರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ನಡೆದ ರಸ್ತೆ ಸುರಕ್ಷತಾ ಅಭಿಯಾನ ಕಾರ್ಯಕ್ರಮಕ್ಕೆ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಆಗಮಿಸಿದ್ದರು. 

ಆದರೆ, ಸ್ಥಳಕ್ಕೆ ಬಂದಾಗ ರಾಹುಕಾಲ ಇದೆ ಎಂದು ರೇವಣ್ಣ ಹತ್ತು ನಿಮಿಷ ಕಾರಿನಲ್ಲಿಯೇ ಕುಳಿತಿದ್ದರು. 

ನಂತರ ಬೆಳಗ್ಗೆ 9.54ಕ್ಕೆ ಕಾರಿನಿಂದ ಕೆಳಗಿಳಿದು ಹಣೆಗೆ ವಿಭೂತಿ ಹಚ್ಚಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ರಾಹುಕಾಲವಿದೆ ಎನ್ನುವ ಕಾರಣಕ್ಕೆ ಕಾರಿನಿಂದ ಇಳಿಯದ ರೇವಣ್ಣ ಅಲ್ಪ ಸಮಯ ಬಿಟ್ಟು ಕಾರಿನಿಂದ ಇಳಿದರು. 

ವಾಸ್ತು ಪ್ರಕಾರವೇ ನಡೆದುಕೊಳ್ಳುವ ಎಚ್.ಡಿ.ರೇವಣ್ಣ ಈ ಹಿಂದೆಯೂ ಕೂಡ ಅನೇಕ ಬಾರಿ ಇದೇ ರೀತಿ ವಾಸ್ತುವಿನಂತೆ ನಡೆದುಕೊಂಡಿರುವ ಘಟನೆಗಳು ನಡೆದಿವೆ.