ಕಳೆದ 15 ದಿನಗಳ ಹಿಂದೆ ಚಿನ್ನದ ಬೆಲೆ 300 ರೂ. ಕಡಿಮೆಯಾಗಿತ್ತು.

ಬೆಂಗಳೂರು(ಫೆ.25):ಜಾಗತಿಕ ಮಾರುಕಟ್ಟೆಯಲ್ಲಿ ಆಭರಣಗಳ ಬೆಲೆಯಲ್ಲಿ ಕುಸಿತ ಕಂಡ ಪರಿಣಾಮ ಚಿನ್ನದ ದರ ಮತ್ತೊಮ್ಮ ಭಾರಿ ಏರಿಕೆಯಾಗಿದೆ. ಒಂದೇ ದಿನದಲ್ಲಿ 10 ಗ್ರಾಂ ಚಿನ್ನಕ್ಕೆ 325 ರೂ. ಏರಿಕೆಯಾಗಿದೆ. ಕಳೆದ 4 ತಿಂಗಳ ನಂತರ ಚಿನ್ನದ ಬೆಲೆ 30 ಸಾವಿರ ಗಡಿ ದಾಟಿದೆ. ಪ್ರಸ್ತುತ 10 ಗ್ರಾಂ ಚಿನ್ನಕ್ಕೆ 30,175 ರೂ. ಬೆಲೆಯಿದೆ.

ಕಳೆದ 15 ದಿನಗಳ ಹಿಂದೆ ಚಿನ್ನದ ಬೆಲೆ 300 ರೂ. ಕಡಿಮೆಯಾಗಿತ್ತು. ಈಗ ಮತ್ತೇ 325 ರೂ. ಏರಿಕೆಯಾಗಿದೆ. ಜನವರಿಯಿಂದ ದೇಶೀಯ ಚಿನ್ನದ ಆಮದು ಶೇ.30 ಕುಸಿತ ಕಂಡಿದೆ.ಚೀನಾ ವಿಶ್ವದಲ್ಲಿ ಅತೀ ಹೆಚ್ಚು ಖರೀದಿಸುವ ರಾಷ್ಟ್ರ. ಭಾರತ ಕೂಡ ಚಿನ್ನ ಖರೀದಿಸುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ.