ನವದೆಹಲಿ[ಆ.05]: ಕೇಂದ್ರ ಹಣಕಾಸು ಸಚಿವಾಲಯದ ಕಚೇರಿಗೆ ಪೂರ್ವಾನುಮತಿ ಪಡೆದ ಪತ್ರಕರ್ತರಿಗೆ ಮಾತ್ರವೇ ಪ್ರವೇಶ ಕಲ್ಪಿಸಲಾಗುವುದು ಎಂಬ ನಿಯಮ ಜಾರಿಗೆ ತಂದು ಟೀಕೆಗೆ ಗುರಿಯಾಗಿದ್ದ ನಿರ್ಮಲಾ ಸೀತಾರಾಮನ್‌ ನೇತೃತ್ವದ ಹಣಕಾಸು ಸಚಿವಾಲಯ, ಇದೀಗ ಪತ್ರಕರ್ತರಿಗೆ ಪ್ರಶ್ನೆ ಕೇಳುವುದಕ್ಕೂ ನಿಷೇಧ ಹಾಕಿದೆ.

ಇದರನ್ವಯ ವಿದೇಶಾಂಗ ಸಚಿವಾಲಯ ನಡೆಸುವಂತೆ ಇನ್ನು ಮುಂದೆ ವಾರಕ್ಕೆ ಒಂದು ಬಾರಿ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲೇ ಪತ್ರಕರ್ತರೊಂದಿಗೆ ಹಂಚಿಕೊಳ್ಳಲಿದ್ದಾರೆ. ಈ ವೇಳೆ ಪತ್ರಕರ್ತರು ಯಾವುದೇ ಪ್ರಶ್ನೆ ಕೇಳುವಂತಿಲ್ಲ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.