. ಪಾಕಿಸ್ತಾನ ಭಯೋತ್ಪಾದೆಯನ್ನು ಹೋಗಲಾಡಿಸಲು ಹಲವು ಪ್ರಮಗಳನ್ನು ಅನುಸರಿಸುತ್ತಿದೆ. ಅಲ್ಲದೆ ಉಗ್ರವಾದಕ್ಕೆ ದೊಡ್ಡ ತ್ಯಾಗವನ್ನು ಮಾಡಿದೆ.
ನವದೆಹಲಿ(ಅ.17): ಚೀನಾ ಅಧ್ಯಕ್ಷರ ಸಮ್ಮುಖದಲ್ಲಿಯೇ ಬ್ರಿಕ್ಸ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ ಭಯೋತ್ಪಾದಕರ ತವರೂರು ಎಂದು ಹೇಳಿದ ನಂತರವೂ ಚೀನಾ ಪಾಕಿಸ್ತಾನವನ್ನು ಸಮರ್ಥಿಸಿಕೊಂಡಿದೆ.
ಚೀನಾದ ವಿದೇಶಾಂಗ ಇಲಾಖೆಯ ವಕ್ತಾರರಾದ 'ಹುವಾ ಚಿನ್'ಯುಂಗ್' ಪಾಕ್ ಭಯೋತ್ಪಾದಕ ದೇಶ ಎಂಬ ವಿಷಯಕ್ಕೆ ಪ್ರತಿಕ್ರಯಿಸಿ, ಯಾವುದೇ ಒಂದು ನಿರ್ದಿಷ್ಟ ದೇಶವನ್ನು, ಧರ್ಮ ಅಥವಾ ಸಮುದಾಯವನ್ನು ಉಗ್ರವಾದಕ್ಕೆ ಸಂಪರ್ಕ ಕಲ್ಪಿಸುವುದಕ್ಕೆ ಚೀನಾ ವಿರೋಧಿಸುತ್ತದೆ.'
ಪ್ರತಿಯೊಬ್ಬರಿಗೂ ಗೊತ್ತು ಭಾರತ ಹಾಗೂ ಪಾಕಿಸ್ತಾನ ಭಯೋತ್ಪಾದನೆಗೆ ಬಲಿಪಶುವಾಗಿವೆ. ಪಾಕಿಸ್ತಾನ ಭಯೋತ್ಪಾದೆಯನ್ನು ಹೋಗಲಾಡಿಸಲು ಹಲವು ಪ್ರಮಗಳನ್ನು ಅನುಸರಿಸುತ್ತಿದೆ. ಅಲ್ಲದೆ ಉಗ್ರವಾದಕ್ಕೆ ದೊಡ್ಡ ತ್ಯಾಗವನ್ನು ಮಾಡಿದೆ. ನನ್ನ ಪ್ರಕಾರ ಅಂತರ ರಾಷ್ಟ್ರೀಯ ಸಮುದಾಯ ಪಾಕಿಸ್ತಾನದ ತ್ಯಾಗವನ್ನು ಗೌರವಿಸಬೇಕು' ಎಂದು ತಿಳಿಸಿದರು.
ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ ಒಳಗೊಂಡ ಗೋವಾದಲ್ಲಿ ನಡೆದ ಬ್ರಿಕ್ಸ್ ಸಮಾವೇಶದಲ್ಲಿ ಭಯೋತ್ಪಾದನೆಯುಜಾಗತಿಕಪಿಡುಗಾಗಿದ್ದು, ಭಯೋತ್ಪಾದನೆಗೆಪಾಕಿಸ್ತಾನಮಾತೃಭೂಮಿಯಾಗಿದೆ. ಭಯೋತ್ಪಾದನೆವಿರುದ್ಧಬ್ರಿಕ್ಸ್ರಾಷ್ಟ್ರಗಳುಒಗ್ಗಟ್ಟಾಗಿಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವರಾಷ್ಟ್ರವನ್ನುಶಿಕ್ಷಿಸಬೇಕಿದೆ ಇದಕ್ಕೆ ಬ್ರಿಕ್ಸ್ರಾಷ್ಟ್ರಗಳುಒಂದಾಗಬೇಕು ಎಂದು ಹೇಳಿದ್ದರು.
ಭಯೋತ್ಪಾದನೆ ಸಂಘಟನೆ ಜೈಷ್ ಎ ಮೊಹಮದ್ ಮುಖ್ಯಸ್ಥ ಮಸೂದ ಅಜರ್ ಜಾಗತಿಕ ಮಟ್ಟದಲ್ಲಿ ಕ್ರಮ ಕೈಗೊಳ್ಳುವ ಭಾರತದ ಪ್ರಸ್ತಾಪಕ್ಕೆ ಚೀನಾ ತಡೆಯೊಡ್ಡುತ್ತಲೆ ಬಂದಿದೆ.
