ಒಂದು ಕಡೆ ಮೀ ಟೂ ಅಭಿಯಾನ ಅನೇಕ ಪುರುಷರ ಹಳೆಯ ಕತೆಯನ್ನು ಬಹಿರಂಗ ಮಾಡುತ್ತಿದ್ದರೆ ಇದಕ್ಕ ಸಮಾನಾಂತರವಾಗಿ ಹಿಮ್ ಟು ಅಭಿಯಾನ ಆರಂಭವಾಗಿದೆ. ಪುರುಷರು ಸೇಫ್ ಅಲ್ಲ ಎಂಬುದನ್ನು ಈ ಹ್ಯಾಶ್ ಟ್ಯಾಗ್ ಸಾರಿ ಹೇಳುತ್ತಿದೆ.

ನ್ಯೂಯಾರ್ಕ್(ಅ.14)  ವಿವಿಧ ಕ್ಷೇತ್ರಗಳಲ್ಲಿ ನಡೆಯುವ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಮಹಿಳೆಯರು ಮಿ ಟೂ ಅಭಿಯಾನ ನಡೆಸುತ್ತಿದ್ದು ಸಾಮೂಹಿಕವಾಗಿ ಧ್ವನಿ ಎತ್ತಿದ್ದಾರೆ. ಆದರೆ ಈ ಪ್ರಪಂಚದಲ್ಲಿ ಮಹಿಳೆಯರು ಮಾತ್ರ ಅಲ್ಲ,,ಪುರುಷರು ಸುರಕ್ಷಿತರಲ್ಲ. ಇದೇ ಕಾರಣಕ್ಕೆ ಅಮೆರಿಕಾದಲ್ಲಿ ಒಂದು ಅಭಿಯಾನ ಶುರುವಾಗಿದೆ.

 ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಟ್ರಂಪ್​​​​ ಆಪ್ತ 58 ವರ್ಷದ ಬ್ರೆಟ್‌ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಹಲವರು ಆತಂಕ ವ್ಯಕ್ತಪಡಿಸಿದ್ದರು.

ಅಮೆರಿಕಾದಲ್ಲಿ ಪೀಟರ್​ ಹಾನ್ಸ್​ಸನ್ಸ್​​ ಎನ್ನುವವರ ತಾಯಿ ಸಾಮಾಜಿಕ ಜಾಲತಾಣದಲ್ಲಿ ನನ್ನ ಮಗನ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಇಂತಹ ವ್ಯವಸ್ಥೆ ಇದೆ ನೋಡಿ. ಲೈಂಗಿಕ ದೌರ್ಜನ್ಯದಿಂದಾಗಿ ನನ್ನ ಮಗ ಡೇಟಿಂಗ್​ಗೆ ಹೋಗಲು ಹೆದರುತ್ತಾರೆ ಎಂದು ಬರೆದು ಹಿಮ್​​ ಟೂ ಎನ್ನುವ ಹ್ಯಾಶ್​ ಟ್ಯಾಗ್​ನೊಂದಿಗೆ ಪೋಸ್ಟ್​​ ಮಾಡಿದ್ದರು ಇದೀಗ ಈ ಹ್ಯಾಶ್ ಟ್ಯಾಗ್ ಸಹ ಜನಪ್ರಿಯವಾಗುತ್ತಿದೆ.

Scroll to load tweet…