Asianet Suvarna News Asianet Suvarna News

ಕೈಗೆ ಶಾಕ್: ಕರ್ನಾಟಕದ ಬೆನ್ನಲ್ಲೇ ಮತ್ತೊಂದು ರಾಜ್ಯದಲ್ಲಿ 'ಆಪರೇಷನ್ ಕಮಲ'?

ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ಸಿಗೆ ಬಿಜೆಪಿಯಿಂದ ‘ಆಪರೇಷನ್‌’?| ಶಾಸಕರನ್ನು ಸೆಳೆಯಲು ಯತ್ನ: ಸಚಿವ ಆರೋಪ

After Karnataka BJP eyeing up Madhya Pradesh
Author
Bhopal, First Published Jan 17, 2019, 10:40 AM IST

ನವದೆಹಲಿ[ಜ.17]: ಕರ್ನಾಟಕದ ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ‘ಆಪರೇಷನ್‌ ಕಮಲ’ ಆರಂಭಿಸಿದೆ ಎನ್ನಲಾಗುತ್ತಿರುವ ಬಿಜೆಪಿ, ಕಳೆದ ತಿಂಗಳಷ್ಟೇ ಅಧಿಕಾರಕ್ಕೇರಿದ ಮಧ್ಯಪ್ರದೇಶದ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಲು ಅದೇ ತಂತ್ರಗಾರಿಕೆಯನ್ನು ಮಾಡುತ್ತಿದೆಯೇ?

ಹೌದು ಎನ್ನುತ್ತಿದ್ದಾರೆ ಆ ರಾಜ್ಯದ ಸಚಿವರೊಬ್ಬರು. ಮೂರು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ಆಕ್ರೋಶಗೊಂಡಿರುವ ಬಿಜೆಪಿ, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಕುದುರೆ ವ್ಯಾಪಾರ ಮಾಡಲು ಪ್ರಯತ್ನಿಸುತ್ತಿದೆ ಎಂದು ಕಾನೂನು ಸಚಿವ ಪಿ.ಸಿ. ಶರ್ಮಾ ಆರೋಪಿಸಿದ್ದಾರೆ.

After Karnataka BJP eyeing up Madhya Pradesh

230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಹುಮತಕ್ಕೆ 116 ಸ್ಥಾನಗಳು ಬೇಕು. ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ 114 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್‌, ಕೇವಲ 2 ಸ್ಥಾನಗಳಿಂದ ಬಹುಮತದಿಂದ ವಂಚಿತವಾಗಿತ್ತು. 109 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದ ಬಿಜೆಪಿ, ಕೇವಲ 7 ಸ್ಥಾನಗಳಿಂದ ಮ್ಯಾಜಿಕ್‌ ಸಂಖ್ಯೆಯಿಂದ ದೂರ ಉಳಿದಿತ್ತು. ಕಮಲ್‌ನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ಬಿಎಸ್ಪಿಯ ಇಬ್ಬರು, ಎಸ್ಪಿಯ ಓರ್ವ ಹಾಗೂ ನಾಲ್ವರು ಪಕ್ಷೇತರರ ಬೆಂಬಲವಿದೆ. ಇಷ್ಟೂಮಂದಿ ಬಿಜೆಪಿ ಬೆಂಬಲಕ್ಕೆ ನಿಂತರೆ ಕಾಂಗ್ರೆಸ್‌ಗೆ ಅಧಿಕಾರ ಕಳೆದುಕೊಳ್ಳುವ ಅಪಾಯ ಇದೆ.

Follow Us:
Download App:
  • android
  • ios