ಪಿತೃ ವಿಯೋಗದ ನಡುವೆಯೂ ಮತ ಹಾಕಿದ ಶಾಸಕ ಅಶೋಕ್ ಪಟ್ಟಣ್

First Published 23, Mar 2018, 11:50 AM IST
After Father Death Ashok Pattan Comes And Vote Rajya Sabha Election
Highlights

ರಾಮದುರ್ಗದ ಮಾಜಿ ಶಾಸಕ, ಹಿರಿಯ ಸ್ವಾತಂತ್ರ್ಯಯೋಧ ,ಶತಾಯುಷಿ  ಮಹಾದೇವಪ್ಪ ಪಟ್ಟಣ ಇಂದು ಮುಂಜಾನೆ 7 ಗಂಟೆಗೆ ತಮ್ಮ 107 ನೇ ವಯಸ್ಸಿನಲ್ಲಿ ಅವರು ಕೊನೆಯುಸಿಳೆದಿದ್ದಾರೆ. ಅವರು ಪತ್ನಿ ಹಾಗೂ ಮಾಜಿ ಶಾಸಕಿ ಶ್ರೀಮತಿ ಶಾರದಮ್ಮ ಪಟ್ಟಣ, ಪುತ್ರ ಹಾಲಿ ಶಾಸಕ ಅಶೋಕ ಪಟ್ಟಣ ಸಹಿತ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

ಬೆಂಗಳೂರು(ಮಾ.23): ಪಿತೃ ವಿಯೋಗದ ನಡುವೆಯೂ ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ರಾಜ್ಯಸಭಾ ಚುನಾವಣೆಯಲ್ಲಿ ಮತಗಟ್ಟೆಗೆ ಬಂದು ಕಾಂಗ್ರೆಸ್ ಪರ‌ ಮತ ಚಲಾಯಿಸಿದ್ದಾರೆ

ರಾಮದುರ್ಗದ ಮಾಜಿ ಶಾಸಕ, ಹಿರಿಯ ಸ್ವಾತಂತ್ರ್ಯಯೋಧ ,ಶತಾಯುಷಿ  ಮಹಾದೇವಪ್ಪ ಪಟ್ಟಣ ಇಂದು ಮುಂಜಾನೆ 7 ಗಂಟೆಗೆ ತಮ್ಮ 107 ನೇ ವಯಸ್ಸಿನಲ್ಲಿ ಅವರು ಕೊನೆಯುಸಿಳೆದಿದ್ದಾರೆ. ಅವರು ಪತ್ನಿ ಹಾಗೂ ಮಾಜಿ ಶಾಸಕಿ ಶ್ರೀಮತಿ ಶಾರದಮ್ಮ ಪಟ್ಟಣ, ಪುತ್ರ ಹಾಲಿ ಶಾಸಕ ಅಶೋಕ ಪಟ್ಟಣ ಸಹಿತ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

1939 ರ ಎಪ್ರಿಲ್ ತಿಂಗಳಲ್ಲಿ ರಾಮದುರ್ಗ ಮಹಾರಾಜ ಭಾವೆ ವಿರುದ್ಧ ನಡೆದ ಕರನಿರಾಕರಣೆ ಚಳವಳಿಯ ನಾಯಕತ್ವ ವಹಿಸಿದ್ದ ಪಟ್ಟಣ ಅವರ ವಿರುದ್ಧ ಬ್ರಿಟಿಷ ಆಡಳಿತ "ಕಂಡಲ್ಲಿ ಗುಂಡಿಕ್ಕುವ" ವಾರಂಟ್ ಹೊರಡಿಸಿತ್ತು. ಭೂಗತರಾಗಿದ್ದ ಪಟ್ಟಣ ಅವರು ಎಂಟು ವರ್ಷಗಳ ನಂತರ ರಾಮದುರ್ಗಕ್ಕೆ ಹಿಂತಿರುಗಿದರು. 1957 ರಲ್ಲಿ ಕಾಂಗ್ರೆಸ್ ವಿರುದ್ಧ ಲೋಕಸೇವಾ ಸಂಘದ ಪರವಾಗಿ ಸ್ಪರ್ಧಿಸಿ ವಿಧಾನ ಸಭೆಗೆ ಆಯ್ಕೆಯಾಗಿದರು.

loader