ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಜೆರುಸಿಲೆಂಗೆ ಉಚಿತ ಟ್ರಿಪ್

First Published 17, Feb 2018, 3:13 PM IST
After Congress BJP promises free Jerusalem trip to senior citizens in Nagaland
Highlights

ನಾಗಾಲ್ಯಾಂಡ್’ನಲ್ಲಿ ಇದೇ ತಿಂಗಳ ಕೊನೆಯಲ್ಲಿ  ವಿಧಾನಸಭಾ ಚುನಾವಣೆಯಿದ್ದು, ಕ್ರಿಶ್ಚಿಯನ್ನರೇ ಬಹುಸಂಖ್ಯಾತರಾಗಿರುವ ನಾಗಾಲ್ಯಾಂಡ್’ನ ಹಿರಿಯ ನಾಗರೀಕರಿಗೆ ಭಾರತೀಯ ಜನತಾ ಪಕ್ಷ ಆಫರ್ ನೀಡಿದೆ.

ಬೆಂಗಳೂರು (ಫೆ.17): ನಾಗಾಲ್ಯಾಂಡ್’ನಲ್ಲಿ ಇದೇ ತಿಂಗಳ ಕೊನೆಯಲ್ಲಿ  ವಿಧಾನಸಭಾ ಚುನಾವಣೆಯಿದ್ದು, ಕ್ರಿಶ್ಚಿಯನ್ನರೇ ಬಹುಸಂಖ್ಯಾತರಾಗಿರುವ ನಾಗಾಲ್ಯಾಂಡ್’ನ ಹಿರಿಯ ನಾಗರೀಕರಿಗೆ ಭಾರತೀಯ ಜನತಾ ಪಕ್ಷ ಆಫರ್ ನೀಡಿದೆ.

ಒಂದು ವೇಳೆ ನಾಗಾಲ್ಯಾಂಡ್’ನಲ್ಲಿ ಬಿಜೆಪಿ ಗೆದ್ದರೆ ಕ್ರಿಶ್ಚಿಯನ್  ಹಿರಿಯ ನಾಗರೀಕರಿಗೆ ಉಚಿತವಾಗಿ ಜೆರುಸಿಲೆಂಗೆ ಕಳುಹಿಸಲಾಗುವುದು. ಲಕ್ಕಿ ಡ್ರಾ ಮೂಲಕ 50 ಮಂದಿಯನ್ನು ಆಯ್ಕೆ ಮಾಡಿ ಜೆರುಸಿಲಂಗೆ ಕಳುಹಿಸಲಾಗುವುದು ಎಂದು ಪಕ್ಷದ ಮ್ಯಾನಿಫೆಸ್ಟೋನಲ್ಲಿ ಹೇಳಲಾಗಿದೆ.

 ಇದೇ ತಿಂಗಳು 27 ರಂದು ನಾಗಾಲ್ಯಾಂಡ್ ಚುನಾವಣೆ ನಡೆಯಲಿದೆ. ಒಟ್ಟು 60 ಸ್ಥಾನಗಳಲ್ಲಿ 20 ಸ್ಥಾನಗಳಲ್ಲಿ  ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.  ಕೇವಲ 18 ಸ್ಥಾನಗಳಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳು  ಸ್ಪರ್ಧಿಸುತ್ತಿದ್ದಾರೆ.    

loader