ವಿಜಯಪುರ[ಜು. 29]  ಬಿಜೆಪಿ ಅಧಿಕಾರಕ್ಕೆ ಬಂದ ಬೆನ್ನಲ್ಲೆ ಉತ್ತರ ಕರ್ನಾಟಕಕ್ಕೆ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಶುರುವಾಗಿದೆ.

ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಉತ್ತರ ಕರ್ನಾಟಕ ಹೋರಾಟ ಸಮಿತಿ  ಪ್ರಧಾನಕಾರ್ಯದರ್ಶಿ ನಾಗೇಶ ಗೋಲಶಟ್ಟಿ, ಬಿಜೆಪಿ ಸರ್ಕಾರದಲ್ಲಿ ಉತ್ತರ ಕರ್ನಾಟಕಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲೆಬೇಕು ಎಂದು ಆಗ್ರಹಿಸಿದ್ದಾರೆ.

ಮೂರು ದಿನದ ಗಡವು, ಮೊದಲು ಕೆಲಸ ಮುಗಿಸಿ: ಬಿಎಸ್ ವೈ ಖಡಕ್ ಸೂಚನೆ

ಬೆಳಗಾವಿ ಸುವರ್ಣ ಸೌಧದಲ್ಲೆ ಎಲ್ಲ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಬೇಕು. ಉತ್ತರ ಕರ್ನಾಟಕದ 13 ಜಿಲ್ಲೆಗಳ 36 ಕಚೇರಿಗಳ ಪೈಕಿ 18 ಕಚೇರಿಗಳನ್ನ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಿಸಬೇಕು. ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್ ಘೋಷಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ಹಿಂದಿನ ದೋಸ್ತಿ ಸರ್ಕಾರ ಉತ್ತರ ಕರ್ನಾಟಕವನ್ನು ಕಡೆಗಣನೆ ಮಾಡಿತ್ತು ಎಂಬ ಆರೋಪಗಳು ಹಲವಾರು ಸಾರಿ ಕೇಳಿಬಂದಿದ್ದವು. ದೋಸ್ತಿ ಸರ್ಕಾರ ಮಂಡ್ಯ, ರಾಮನಗರ ಮತ್ತು ಹಾಸನಕ್ಕೆ ಸೀಮಿತವಾಗಿದ ಎಂದು ಬಿಜೆಪಿ ನಾಯಕರೇ ಆರೋಪ ಮಾಡಿದ್ದರು. ಕೊನೆ ಘಟ್ಟದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಉತ್ತರ ಕರ್ನಾಟಕ ಭಾಗದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. 

ಅಂದು ಆರೋಪ ಮಾಡಿದ್ದ  ಅದೇ ಬಿಜೆಪಿ ಅಧಿಕಾರಕ್ಕೆ ಏರಿದೆ. ನಮ್ಮ ಭಾಗವನ್ನು ಕಡೆಗಣನೆ ಮಾಡಲಾಗಿದೆ ಎಂದು ಆರೋಪ ಮಾಡಿಯೇ ಹಿರೇಕೆರೂರು ಶಾಸಕ ಬಿಸಿ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.