ನಮ್ಮ ಸೈನಿಕರಿಗೆ ಇನ್ನುಮುಂದೆ ಬುಲೆಟ್ ಫ್ರೂಫ್ ಜಾಕೆಟ್’ಗಳ ರಕ್ಷಣೆ

First Published 10, Apr 2018, 3:16 PM IST
After 9 Year Wait Indian Soldiers To Finally Get Bulletproof Jackets
Highlights

ಬೇಡಿಕೆ ಸಲ್ಲಿಸಿ 9 ವರ್ಷಗಳ ಬಳಿಕ ಭಾರತೀಯ ಸೈನಿಕರಿಗೆ ಮೊದಲ ಬಾರಿಗೆ ಬುಲೆಟ್ ಫ್ರೂಫ್ ಜಾಕೆಟ್’ಗಳು ದೊರೆಯುತ್ತಿದೆ

ನವದೆಹಲಿ : ಬೇಡಿಕೆ ಸಲ್ಲಿಸಿ 9 ವರ್ಷಗಳ ಬಳಿಕ ಭಾರತೀಯ ಸೈನಿಕರಿಗೆ ಮೊದಲ ಬಾರಿಗೆ ಬುಲೆಟ್ ಫ್ರೂಫ್ ಜಾಕೆಟ್’ಗಳು ದೊರೆಯುತ್ತಿದೆ. ಈಗಾಗಲೇ ಬೇಡಿಕೆ ಸಲ್ಲಿಸಿದ್ದು, ಇನ್ನುಮುಂದೆ ಯೋಧರು ಬುಲೆಟ್ ಪ್ರೂಫ್ ಜಾಕೆಟ್ ತೊಟ್ಟು ಹೋರಾಡಲಿದ್ದಾರೆ. ಮೇಕ್ ಇಂಡಿಯಾ ಯೋಜನೆಯಡಿಯಲ್ಲಿ ಸರ್ಕಾರವು ಕಾಂಟ್ರಾಕ್ಟ್’ಗೆ ಸಹಿಯನ್ನು ಮಾಡಿದೆ.

ಒಟ್ಟು 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್’ಗಳಿಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಬುಲೆಟ್ ಪ್ರೂಫ್ ಜಾಕೆಟ್’ಗಳಿಗಾಗಿ ಎಸ್ಎಂಪಿಪಿ ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಕೊಳ್ಳಲಾಗಿದೆ.  ಓಕ್ಲಾ ಕೈಗಾರಿಕಾ ಪ್ರದೇಶದಲ್ಲಿ  ಕಂಪನಿ ಇದ್ದು, ಒಟ್ಟು ಬುಲೆಟ್ ಪ್ರೂಫ್ ಜಾಕೆಟ್’ಗಳಿಗಾಗೀ 639 ಕೋಟಿ ರು. ಒಪ್ಪಂದ ಮಾಡಿಕೊಳ್ಳಲಾಗಿದೆ.

 ಇನ್ನು ಮೂರು ವರ್ಷಗಳಲ್ಲಿ ಇಷ್ಟು ಸಂಖ್ಯೆಯಲ್ಲಿ ಜಾಕೆಟ್’ಗಳನ್ನು ಕಂಪನಿಯು ಒದಗಿಸಲಿದೆ. ಈ ಜಾಕೆಟ್’ಗಳು ಭಾರತೀಯ ಸೇನಾ ಪಡೆಗೆ ಹೆಚ್ಚಿನ ಪ್ರಮಾಣದಲ್ಲಿ ಸಾಮರ್ಥ್ಯವನ್ನು ಒದಗಿಸಲಿವೆ.  ಶತ್ರು ಪಡೆಗಳೊಂದಿಗೆ ಹೋರಾಟ ನಡೆಸುವ ವೇಳೆ ನಮ್ಮ ಸೈನಿಕರನ್ನು ರಕ್ಷಣೆ ಮಾಡುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸಲಿವೆ.

loader