7ನೇ ವೇತನ ಆಯೋಗದ ತೆರಿಗೆ ಮುಕ್ತ ಗ್ರಾಜ್ಯುಟಿ ಬಿಲ್ ಪಾಸ್ ಮಾಡಿದ ಕೇಂದ್ರ, ನೌಕರರಿಗೆ ತೆರಿಗೆ ವಿನಾಯಿತಿ !

First Published 22, Mar 2018, 4:37 PM IST
After 7th Pay Commission government to now double tax free gratuity to Rs 20 lakh
Highlights

ಈ ಮಸೂದೆಯನ್ವಯ ಮಹಿಳಾ ಉದ್ಯೋಗಿಗಳ ಹೆರಿಗೆ ರಜೆ 26 ವಾರಗಳ ಕಾಲ ನಿರಂತರ ಸೇವೆಯಾಗಿ ಪರಿಗಣಿಸಲ್ಪಡುತ್ತದೆ.

ನವದೆಹಲಿ (ಮಾ.22): ಕೇಂದ್ರ ಸರ್ಕಾರವು ಗ್ರಾಜ್ಯುಟಿ ಪಾವತಿ(ತಿದ್ದುಪಡಿ) ಮಸೂದೆಯನ್ನು ಯಾವುದೇ ಚರ್ಚೆಯಿಲ್ಲದೆ ರಾಜ್ಯಸಭೆಯಲ್ಲಿ ಅಂಗೀಕರಿಸಿದ್ದು ನೌಕರರು 20 ಲಕ್ಷ ರೂ.ಗಳವರೆಗೂ ಯಾವುದೇ ತೆರಿಗೆ ವಿಧಿಸಬೇಕಾಗಿಲ್ಲ.

ಸರ್ಕಾರದ ತೆರಿಗೆ ಮುಕ್ತ ಗ್ರಾಜ್ಯುಟಿ ಮಸೂದೆಯಿಂದ 5 ವರ್ಷ ಪೂರ್ಣಗೊಳಿಸಿರುವ ಕನಿಷ್ಠ 10 ಮಂದಿ ಕಾರ್ಮಿಕರಿರುವ ಸರ್ಕಾರದ ಸಂಸ್ಥೆಯ 10 ಲಕ್ಷ ನೌಕರರು 20 ಲಕ್ಷದವರೆಗೂ ತೆರಿಗೆಯಿಂದ ವಿನಾಯಿತಿ ಪಡೆದುಕೊಳ್ಳಲಿದ್ದಾರೆ.

ಈ ಮಸೂದೆಯನ್ವಯ ಮಹಿಳಾ ಉದ್ಯೋಗಿಗಳ ಹೆರಿಗೆ ರಜೆ 26 ವಾರಗಳ ಕಾಲ ನಿರಂತರ ಸೇವೆಯಾಗಿ ಪರಿಗಣಿಸಲ್ಪಡುತ್ತದೆ. ಇದರಿಂದ ಸರ್ಕಾರ, ಸಂಘಟಿತ ಸಂಸ್ಥೆಯ ಲಕ್ಷಾಂತರ ಮಹಿಳಾ ಉದ್ಯೋಗಿಗಳು ಅನುಕೂಲ ಪಡೆದುಕೊಳ್ಳಲಿದ್ದಾರೆ. ಲೋಕಸಭೆಯಲ್ಲಿ ಈ ಮಸೂದೆ ಕಳೆದ ವಾರ ಅಂಗೀಕರಿಸಲಾಗಿತ್ತು. ಕೇಂದ್ರ ಸರ್ಕಾರ ಇತ್ತೀಚಿಗಷ್ಟೆ 7ನೇ ವೇತನ ಆಯೋಗವನ್ನು ಜಾರಿಗೊಳಿಸಿತ್ತು. ಇದರಿಂದ ಲಕ್ಷಾಂತರ ಉದ್ಯೋಗಿಗಳ ವೇತನ ಹೆಚ್ಚಳಗೊಂಡಿತ್ತು.

loader